ಹುಬ್ಬಳ್ಳಿ: ಈರುಳ್ಳಿ, ಟೊಮೆಟೊ ದರ ಏರಿಕೆಯ ಬೆನ್ನಲ್ಲೆ ಬೆಳ್ಳುಳ್ಳಿ ದರವೂ ಏರಿಕೆಯತ್ತ ಸಾಗುತ್ತಿದ್ದು, ಬೆಳೆಗಾರರಿಗೆ ಖುಷಿ ತಂದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹25 ಸಾವಿರಕ್ಕೆ ತಲುಪಿದೆ. ತಾಲ್ಲೂಕಿನಾದ್ಯಂತ ರೈತರು ಬೆಳ್ಳುಳ್ಳಿಯನ್ನು ಈಗಾಗಲೇ ಕಟಾವು ಮಾಡಿದ್ದಾರೆ. ಕಣದಲ್ಲಿ ಮತ್ತು ಮನೆ ಆವರಣದಲ್ಲಿ ಗೂಡು ಮತ್ತು ಬಣವೆ ಹಾಕಿ ಒಣಗಿಸುತ್ತಿದ್ದಾರೆ.

ದಪ್ಪ ಬೆಳ್ಳುಳ್ಳಿ ದರ ಕ್ವಿಂಟಲ್ಗೆ ₹18 ಸಾವಿರದಿಂದ ₹25 ಸಾವಿರ, ಸಣ್ಣದು ಕ್ವಿಂಟಲ್ಗೆ ₹20 ಸಾವಿರದಿಂದ ₹21 ಸಾವಿರ, ಪುಡಿ ಬೆಳ್ಳುಳ್ಳಿ ಕ್ವಿಂಟಲ್ಗೆ ₹15 ಸಾವಿರದಿಂದ ₹19 ಸಾವಿರ ಇದೆ. ಬೇಸಿಗೆ ಬೆಳೆಯಾಗಿ ಬೆಳ್ಳುಳ್ಳಿಯನ್ನು ಬೆಳೆಯಲಾಗುತ್ತಿದ್ದು ವಿಜಯಪುರ, ಬೆಳಗಾವಿ, ಚಿತ್ರದುರ್ಗ ಹಾಗೂ ಮಹಾರಾಷ್ಟ್ರದ ಕೆಲ ಜಿಲ್ಲೆಗಳ ವ್ಯಾಪಾರಸ್ಥರು ಬಿತ್ತನೆ ಬೀಜಕ್ಕಾಗಿ ಈ ಭಾಗದಿಂದ ಬೆಳ್ಳುಳ್ಳಿ ಖರೀದಿಸಲು ಮುಂದಾಗಿದ್ದು ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ.

‘ನಾನು 2.5 ಎಕರೆಯಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದೆ, ಬೀಜ, ಗೊಬ್ಬರ, ಬಿತ್ತನೆ, ಕಳೆ, ಔಷಧಿ, ಕಟಾವು ಸೇರಿ ಒಟ್ಟು ₹80 ಸಾವಿರ ಖರ್ಚು ಮಾಡಿದ್ದೆ. ಮಳೆ ಹೆಚ್ಚಾಗಿ ತೇವಾಂಶ ಹೆಚ್ಚಿ ರೋಗ ಬಾಧಿಸಿದ್ದರಿಂದ ಇಳುವರಿ ಸ್ವಲ್ಪ ಕಡಿಮೆಯಾಗಿದ್ದು, ಪೇಟೆಯಲ್ಲಿ ದರ ಉತ್ತಮವಾಗಿದ್ದರಿಂದ ಖರ್ಚು ತೆಗೆದು ₹3 ಲಕ್ಷ ಆದಾಯ ಬರುವ ನೀರಿಕ್ಷೆಯಿದೆ’ ಎಂದು ಹಲಗೇರಿಯ ರೈತ ಪ್ರಕಾಶ ದೇಸಾಯಿ ತಿಳಿಸಿದರು.

ಯಥಾಸ್ಥಿತಿ: ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಪ್ರತಿ ಕೆ.ಜಿ.ಗೆ ₹320ರಿಂದ ₹400 ರವರೆಗೆ ಇದೆ. ಕಳೆದ ಒಂದು ತಿಂಗಳಿನಿಂದ ಇದೇ ದರ ಮುಂದುವರಿದಿದೆ ಎಂದು ಜನತಾ ಬಜಾರ್ ವ್ಯಾಪಾರಿ ತೋಟಯ್ಯ ಹಿರೇಮಠ ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಬೆಳ್ಳುಳ್ಳಿ ದರವು ಸರಾಸರಿ ₹360ರಿಂದ ₹400 ಇದೆ. ಕಳೆದ ಹಲವು ವಾರಗಳಿಂದ ದರದಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಗದಗ ಜಿಲ್ಲೆಯಲ್ಲಿ ಮಾರಾಟವಾಗುವ ಗುಣಮಟ್ಟದ ವಿಜಯಪುರ ಬೆಳ್ಳುಳ್ಳಿ ಕೆ.ಜಿ.ಗೆ ₹280 ಇದೆ. ಬಿ ಮತ್ತು ಸಿ ಗ್ರೇಡ್ ಬೆಳ್ಳುಳ್ಳಿ ಕೆ.ಜಿ.ಗೆ ₹220ರಿಂದ ₹250 ಇದೆ.

ಹೊಸಪೇಟೆ ಮಾರುಕಟ್ಟೆಯಲ್ಲಿ ಚಿಲ್ಲರೆ ಬೆಳ್ಳುಳ್ಳಿ ದರ ಕೆ.ಜಿ.ಗೆ ₹280ರಿಂದ ₹300ರಷ್ಟಿದೆ. ಸಗಟು ಮಾರಾಟದ ಬೆಳ್ಳುಳ್ಳಿ ದರ ₹270ರಷ್ಟಿದೆ ಎಂದು ದಿನಸಿ ವ್ಯಾಪಾರಿ ಕೃಷ್ಣಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.