ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿಗೆ (ಪಿ.ಎಫ್) ನೌಕರರ ಕಡೆಯಿಂದ ಜಮಾ ಆಗುವ ವಾರ್ಷಿಕ ₹ 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲಿನ ಬಡ್ಡಿಗೆ ತೆರಿಗೆ ಲೆಕ್ಕ ಹೇಗೆ ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು ನಿಯಮಗಳನ್ನು ಪ್ರಕಟಿಸಿದೆ.

2021–22ನೇ ಸಾಲಿನ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪಿ.ಎಫ್.ನಲ್ಲಿ ತೆರಿಗೆಯಿಂದ ವಿನಾಯಿತಿ ಇರುವ ಬಡ್ಡಿಗೆ ಮಿತಿ ಹಾಕುವುದಾಗಿ ಹೇಳಿದ್ದರು. ತೆರಿಗೆ ವ್ಯಾಪ್ತಿಗೆ ಬರುವ ಬಡ್ಡಿ ಲೆಕ್ಕಹಾಕುವುದು ಹೇಗೆ ಎಂಬ ಬಗ್ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಬುಧವಾರ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ತೆರಿಗೆ ಲೆಕ್ಕಹಾಕುವ ಉದ್ದೇಶಕ್ಕೆ ಪಿ.ಎಫ್. ಖಾತೆಯಲ್ಲಿ ಪ್ರತ್ಯೇಕ ಖಾತೆಯೊಂದನ್ನು ಮಾಡಿ, ನೌಕರರ ಕಡೆಯಿಂದ ಬರುವ ತೆರಿಗೆ ವ್ಯಾಪ್ತಿಗೆ ಒಳಪಡುವ ಹಾಗೂ ತೆರಿಗೆ ವ್ಯಾಪ್ತಿಗೆ ಒಳಪಡದ ಕೊಡುಗೆ ಮೊತ್ತವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.

ಕಂಪನಿಗಳ ಕಡೆಯಿಂದ ಪಿ.ಎಫ್. ಖಾತೆಗೆ ಹಣ ಜಮಾ ಆಗುತ್ತಿದ್ದರೆ, ಅಂತಹ ಕಂಪನಿಗಳ ನೌಕರರ ₹ 2.5 ಲಕ್ಷದವರೆಗಿನ ಮೊತ್ತದ ಮೇಲಿನ ಬಡ್ಡಿಗೆ ತೆರಿಗೆ ಇಲ್ಲ. ನೌಕರಿ ನೀಡಿದವರಿಂದ ಪಿ.ಎಫ್. ಖಾತೆಗೆ ಹಣ ಜಮಾ ಆಗುತ್ತಿಲ್ಲವಾದರೆ, ಅಂತಹ ಕಂಪನಿಗಳ ನೌಕರರ ₹ 5 ಲಕ್ಷದವರೆಗಿನ ಕೊಡುಗೆಯ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರಲಿದೆ ಎಂದು ತೆರಿಗೆ ಸಲಹಾ ಸಂಸ್ಥೆ ನಂಗಿಯಾ ಆ್ಯಂಡ್ ಕಂಪನಿಯ ಪಾಲುದಾರ ಶೈಲೇಶ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.