ಬೆಂಗಳೂರು: ಫ್ಲಿಪ್ಕಾರ್ಟ್ ಸಮೂಹವು ವಾಲ್ಮಾರ್ಟ್ ಇಂಡಿಯಾ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ದೇಶದಲ್ಲಿ ‘ಫ್ಲಿಪ್ಕಾರ್ಟ್ ಹೋಲ್ಸೇಲ್’ ವಹಿವಾಟು ಆಗಸ್ಟ್ನಿಂದ ಆರಂಭವಾಗಲಿದೆ ಎಂದು ಘೋಷಿಸಿದೆ. ಆರಂಭಿಕ ಹಂತದಲ್ಲಿ ದಿನಸಿ ಮತ್ತು ಫ್ಯಾಷನ್ ಉತ್ಪನ್ನಗಳು ಲಭ್ಯವಾಗಲಿವೆ.

ದೇಶದ ಪ್ರಮುಖ ಬ್ರ್ಯಾಂಡ್ಗಳು, ಸ್ಥಳೀಯ ತಯಾರಕರು ಮತ್ತು ಮಾರಾಟಗಾರರು ಫ್ಲಿಪ್ಕಾರ್ಟ್ ಹೋಲ್ಸೇಲ್ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಣ್ಣ ಉದ್ದಿಮೆಗಳಿಗೆ ವಿಸ್ತಾರವಾದ ಶ್ರೇಣಿಯ ಉತ್ಪನ್ನಗಳು ಖರೀದಿಗೆ ಲಭ್ಯವಾಗಲಿವೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.

‘ವಾಲ್ಮಾರ್ಟ್ ಇಂಡಿಯಾದ ಸ್ವಾಧೀನವು ಹೋಲ್ಸೇಲ್ ವಹಿವಾಟನ್ನು ಮತ್ತಷ್ಟು ಬಲಗೊಳಿಸಲಿದೆ. ವಿಶೇಷವಾಗಿ ಕಿರಾಣಿ ಅಂಗಡಿಗಳು ಮತ್ತು ಎಂಎಸ್ಎಂಇಗಳ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ನೆರವಾಗಲಿದೆ’ ಎಂದು ಫ್ಲಿಪ್ಕಾರ್ಟ್ ಸಮೂಹದ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ತಿಳಿಸಿದ್ದಾರೆ. ಈ ಸ್ವಾಧೀನದಿಂದ ವಾಲ್ಮಾರ್ಟ್ ಇಂಡಿಯಾದ ನೌಕರರು ಫ್ಲಿಪ್ಕಾರ್ಟ್ ಸಮೂಹವನ್ನು ಸೇರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.