ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶುದ್ಧ ಬಂಗಾರದ ಬೆಲೆ ₹550ರಷ್ಟು ಹೆಚ್ಚಳ: ಪ್ರತಿ 10 ಗ್ರಾಂಗೆ ₹75,700

Published 16 ಜುಲೈ 2024, 11:32 IST
Last Updated 16 ಜುಲೈ 2024, 11:32 IST
ಅಕ್ಷರ ಗಾತ್ರ

ನವದೆಹಲಿ: ಅಪರಂಜಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹550ರಷ್ಟು ಹೆಚ್ಚಳವಾಗಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಂಗಳವಾರ ಗರಿಷ್ಠ ₹75,700ಕ್ಕೆ ಮಾರಾಟವಾಗಿದೆ. 

ಅಖಿಲ ಭಾರತ ಸರಾಫ್ ಒಕ್ಕೂಟ ಮಾಹಿತಿ ಪ್ರಕಾರ, ಹಳದಿ ಲೋಹದ ಬೆಲೆ 24 ಕ್ಯಾರೆಟ್‌ನ ಪ್ರತಿ ಹತ್ತು ಗ್ರಾಂಗೆ ಸೋಮವಾರ ₹75,150 ಇತ್ತು. 

ರಾಷ್ಟ್ರ ರಾಜಧಾನಿಯಲ್ಲಿ ಶೇ 99.9 ಹಾಗೂ ಶೇ 99.5 ಶುದ್ಧ ಬಂಗಾರದ ಬೆಲೆ ಪ್ರತಿ ಹತ್ತು ಗ್ರಾಂಗೆ ಕ್ರಮವಾಗಿ ₹75,700 ಹಾಗೂ ₹75,350 ರಷ್ಟು ದಾಖಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಗೆ ವ್ಯಾಪಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಇದರೊಂದಿಗೆ ಬೆಳ್ಳಿಯ ಬೆಲೆಯೂ ₹400ರಷ್ಟು ಏರಿಕೆಯಾಗಿದೆ. ಪ್ರತಿ ಕೆ.ಜಿ. ಬೆಳ್ಳಿಯ ಬೆಲೆ ಮಂಗಳವಾರ ₹94,400ಕ್ಕೆ ಮಾರಾಟವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಹಾಗೂ ಬೆಳ್ಳಿ ದರ ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT