ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿನ್ನ, ಬೆಳ್ಳಿ ಧಾರಣೆ ಏರಿಕೆ

Published : 8 ಜುಲೈ 2024, 14:00 IST
Last Updated : 8 ಜುಲೈ 2024, 14:00 IST
ಫಾಲೋ ಮಾಡಿ
Comments

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆ ಕಂಡಿದೆ.

ಬೆಳ್ಳಿ ಧಾರಣೆಯು ಕೆ.ಜಿಗೆ ₹870ರಷ್ಟು ಹೆಚ್ಚಳವಾಗಿ, ₹94,270ಕ್ಕೆ ಮುಟ್ಟಿದೆ. 10 ಗ್ರಾಂ ಚಿನ್ನದ ದರವು ₹100 ಏರಿಕೆಯಾಗಿ, ₹73,410ರಂತೆ ಮಾರಾಟವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,373 ಡಾಲರ್‌ (ಅಂದಾಜು ₹1.98 ಲಕ್ಷ) ಮತ್ತು 30.93 ಡಾಲರ್‌ನಂತೆ (ಅಂದಾಜು ₹2,582) ಮಾರಾಟವಾಗಿದೆ.

ಡಾಲರ್‌ ಮೌಲ್ಯ ಇಳಿಕೆ, ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿ ದರ ಕಡಿತದ ನಿರೀಕ್ಷೆ ಮತ್ತು ಭೌಗೋಳಿಕ–ರಾಜಕೀಯ ಬಿಕ್ಕಟ್ಟು ಹಳದಿ ಲೋಹದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT