ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆದ್ಯತಾ ಸಾಲ ವ್ಯಾಪ್ತಿಗೆ ಇ.ವಿ ವಾಹನಗಳು: ಪರಿಶೀಲನೆ ನಡೆಸುತ್ತೇವೆ ಎಂದ ಕೇಂದ್ರ

Published : 26 ಆಗಸ್ಟ್ 2023, 15:35 IST
Last Updated : 26 ಆಗಸ್ಟ್ 2023, 15:35 IST
ಫಾಲೋ ಮಾಡಿ
Comments

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳನ್ನು (ಇ.ವಿ.) ಆದ್ಯತಾ ವಲಯದ ಸಾಲ ಸೌಲಭ್ಯದ ವ್ಯಾಪ್ತಿಗೆ ತರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಇ.ವಿ.ಯನ್ನು ಆದ್ಯತಾ ವಲಯಕ್ಕೆ ಸೇರಿಸುವಂತೆ ಬೇಡಿಕೆ ಬಂದಿದೆ. ಇದಕ್ಕಾಗಿ ಬ್ಯಾಂಕ್‌ಗಳಿಗೆ ಆದ್ಯತಾ ವಲಯದ ಸಾಲದ ಅಗತ್ಯವನ್ನು ಮರುಹೊಂದಿಸುವ ಕುರಿತು ಗಮನ ಹರಿಸಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಜೊತೆ ಈ ಕುರಿತು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಆರ್‌ಬಿಐ ಮಾರ್ಗಸೂಚಿಯ ಪ್ರಕಾರ, ಬ್ಯಾಂಕ್‌ಗಳು ತಮ್ಮ ಒಟ್ಟು ಸಾಲದಲ್ಲಿ ಶೇ 40ರಷ್ಟನ್ನು ಆದ್ಯತಾ ವಲಯಕ್ಕೆ ನೀಡಬೇಕಿದೆ. ಸದ್ಯ, ಕೃಷಿ, ಎಂಎಸ್‌ಎಂಇ, ರಫ್ತು ಸಾಲ, ಶಿಕ್ಷಣ, ಗೃಹ, ಸಾಮಾಜಿಕ ಮೂಲಸೌಕರ್ಯ ಮತ್ತು ನವೀಕರಿಸಬಲ್ಲ ಇಂಧನಕ್ಕೆ ಆದ್ಯತಾ ವಲಯದ ಸಾಲ (ಪಿಎಸ್‌ಎಲ್‌) ಸೌಲಭ್ಯ ನೀಡಲಾಗುತ್ತಿದೆ. ಇ.ವಿ.ಯನ್ನು ಆದ್ಯತಾ ವಲಯದ ಸಾಲ ವ್ಯಾಪ್ತಿಗೆ ತರುವುದರಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT