ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರು ವಿಕ್ರಯ ಪ್ರಕ್ರಿಯೆಗೆ ಕೇಂದ್ರ ಸರ್ಕಾರವು ಶುಕ್ರವಾರ ಚಾಲನೆ ನೀಡಿದೆ.

ದೇಶದಲ್ಲಿನ ಇದುವರೆಗಿನ ಅತಿದೊಡ್ಡ ಷೇರು ವಿಕ್ರಯ ಪ್ರಕ್ರಿಯೆ ಇದಾಗಿರಲಿದೆ. ‘ಐಪಿಒ’ ಮೂಲಕ ಎಲ್‌ಐಸಿಯಲ್ಲಿನ ತನ್ನ ಪಾಲು ಬಂಡವಾಳವನ್ನು ಮಾರಾಟ ಮಾಡಲಾಗುವುದು ಎಂದು ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದೆ. ಈ ವರ್ಷ ₹ 2.10 ಲಕ್ಷ ಕೋಟಿ ಷೇರು ವಿಕ್ರಯ ಮಾಡಲು ಸರ್ಕಾರ ಗುರಿ ನಿಗದಿಪಡಿಸಿದೆ.

ಉದ್ದೇಶಿತ ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಸಂಬಂಧ ಸರ್ಕಾರಕ್ಕೆ ಸಲಹೆ ನೀಡಲು ಹೂಡಿಕೆ ಬ್ಯಾಂಕರ್ಸ್, ಹಣಕಾಸು ಸಂಸ್ಥೆ ಮತ್ತು ಸಲಹಾ ಸಂಸ್ಥೆಗಳಿಂದ ಬಿಡ್ ಆಹ್ವಾನಿಸಿದೆ.

ಐಪಿಒ ಮುಂಚಿನ ಪೂರ್ವಸಿದ್ಧತಾ ಪ್ರಕ್ರಿಯೆಗಾಗಿ ಹೂಡಿಕೆ ಮತ್ತು ಸರ್ಕಾರಿ ಆಸ್ತಿ ನಿರ್ವಹಣಾ ಇಲಾಖೆಗೆ (ಡಿಐಪಿಎಎಂ) ಎರಡು ಸಲಹಾ ಸಂಸ್ಥೆಗಳ ಸೇವೆ ಪಡೆಯಲು ಸರ್ಕಾರ ಉದ್ದೇಶಿಸಿದೆ.

ಸಲಹಾ ಸಂಸ್ಥೆಗಳು ಜುಲೈ 13ರವರೆಗೆ ತಮ್ಮ ಬಿಡ್ ಸಲ್ಲಿಸಬಹುದು. ಜು.14ರಂದು ಬಿಡ್‌ಗಳನ್ನು ತೆರೆಯಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.