ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಡೆಪ್ಯುಟಿ ಗವರ್ನರ್ ಹುದ್ದೆಗೆ ಹಣಕಾಸು ಸಚಿವಾಲಯವು ಅರ್ಜಿ ಆಹ್ವಾನಿಸಿದೆ.

ಪ್ರಸ್ತುತ ಆರ್ಬಿಐನ ಡೆಪ್ಯುಟಿ ಗವರ್ನರ್ ಆಗಿ ಮೈಕೆಲ್ ಡಿ. ಪಾತ್ರಾ ಇದ್ದಾರೆ. ಇವರ ಅಧಿಕಾರಾವಧಿ ಮುಂದಿನ ಜನವರಿ 14ರಂದು ಮುಕ್ತಾಯಗೊಳ್ಳಲಿದೆ.

ಅರ್ಹತೆ: ಅರ್ಜಿದಾರನು ಭಾರತ ಸರ್ಕಾರದ ಕಾರ್ಯದರ್ಶಿ ಹುದ್ದೆ ಅಥವಾ ತತ್ಸಮಾನ ಮಟ್ಟದಲ್ಲಿ ಕೆಲಸದ ಅನುಭವ ಒಳಗೊಂಡಂತೆ ಸಾರ್ವಜನಿಕ ಆಡಳಿತದಲ್ಲಿ ಕನಿಷ್ಠ 25 ವರ್ಷಗಳ ಅನುಭವವನ್ನು ಹೊಂದಿರಬೇಕು; ಅಥವಾ ಭಾರತೀಯ ಅಥವಾ ಅಂತರರಾಷ್ಟ್ರೀಯ ಸಾರ್ವಜನಿಕ ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ 25 ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.

2025ರ ಜನವರಿ 15ಕ್ಕೆ ಅರ್ಜಿದಾರನ ವಯಸ್ಸು 60 ಮೀರಬಾರದು. ಹುದ್ದೆಯ ಅವಧಿ ಮೂರು ವರ್ಷವಾಗಿದ್ದು, ಮಾಸಿಕ ವೇತನ ₹2.25 ಲಕ್ಷ ಇರಲಿದೆ. ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅರ್ಜಿಯನ್ನು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಿದೆ.

ಆಯ್ಕೆಯಾದ ಅಭ್ಯರ್ಥಿಯು ಹಣಕಾಸು ನೀತಿ ಇಲಾಖೆ ಮತ್ತು ಹಣಕಾಸು ನೀತಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

2020ರ ಜನವರಿಯಲ್ಲಿ ಪಾತ್ರಾ ಅವರು ಮೂರು ವರ್ಷಗಳಿಗೆ ನೇಮಕವಾಗಿದ್ದರು. ನಂತರ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿತ್ತು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.