ಬೆಂಗಳೂರು: ಕೋವಿಡ್–19 ಸಂಕಷ್ಟದ ಹಿನ್ನೆಲೆಯಲ್ಲಿ ವಾಣಿಜ್ಯೋದ್ಯಮಿಗಳು ಜಿಎಸ್ಟಿ ಪಾವತಿಸಲು ಕೊನೆಯ ದಿನ ಜೂನ್ 30 ಕ್ಕೆ ವಿಸ್ತರಿಸಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆಅಧಿನಿಯಮ-2017 ರಲ್ಲಿ ಕಾಲಮಿತಿ ಅಥವಾ ಸಮಯದ ಅವಧಿಯ ವಿಸ್ತರಣೆ ಹಾಗೂ ಕಾರ್ಯಾನುಷ್ಠಾನದ ಮೇಲೆ ಬೀರುವ ಪ್ರಕರಣಗಳೂ ಒಳಗೊಂಡಂತೆ ತೆರಿಗೆ ಕಾನೂನುಗಳಲ್ಲಿನಕೆಲವು ಉಪಬಂಧಗಳನ್ನು ಸಡಿಲಿಸಲು ಪೂರಕವಾಗಿ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಕೇಂದ್ರ ಸರಕು ಮತ್ತು ಸೇವೆಗಳತೆರಿಗೆ ಅಧಿನಿಯಮ-2017 ಕ್ಕೆ ಕೆಲವು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದೆ. ಸರಕು ಮತ್ತು ಸೇವೆಗಳ ತೆರಿಗೆಯು ಇಡೀ ರಾಷ್ಟ್ರದಲ್ಲೇ ಏಕ ರೂಪ ತೆರಿಗೆ ಪದ್ಧತಿ ಜಾರಿಯಲ್ಲಿದೆ.ಅಲ್ಲದೆ, ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಇಲ್ಲದಿರುವುದರಿಂದ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ-2017ಕ್ಕೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಮ್ಮತಿ ನೀಡಿದೆ.

ಸಂಪುಟ ಸಭೆಯ ಇತರ ನಿರ್ಣಯಗಳು

* ರಾಜ್ಯದ 49 ಬರ ಪೀಡಿತ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ತಲಾ₹1 ಕೋಟಿ ನೀಡಲಾಗುವುದು. ಉಳಿದ ತಾಲ್ಲೂಕುಗಳಿಗೆ ತಲಾ ₹50 ಲಕ್ಷ ನೀಡಲು ತೀರ್ಮಾನ

* ಲಾಕ್ಡೌನ್ ಪರಿಣಾಮ ಹೂವು ಬೆಳೆದವರು ನಷ್ಟಕ್ಕೆ ತುತ್ತಾಗಿದ್ದಾರೆ ಎಂಬ ದೂರುಗಳುಬಂದಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ನಷ್ಟ ಆಗಿದ್ದರೆ ಸೂಕ್ತಪರಿಹಾರ ನೀಡಲು ನಿರ್ಧಾರ

* ಬಗರ್ ಹುಕುಂ ಭೂ ಸಾಗುವಳಿದಾರರ ಹಿತಕಾಯಲು ಕರ್ನಾಟಕ ಭೂ ಕಬಳಿಕೆನಿಷೇಧ ಅಧಿನಿಯಮ-2011 ರ ಕೆಲವು ಪರಿಚ್ಛೇಧಗಳಿಗೆಸೂಕ್ತ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗುವುದು.ಲಾಕ್ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯಿದೆ-1964 ರ ಪರಿಚ್ಛೇಧ 94 (ಎ) ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ರೈತರ ಹಿತ ಕಾಯಲಾಗುವುದು.ಅರ್ಜಿಗಳು ಇತ್ಯರ್ಥ ಆಗುವವರೆಗೆ ಪ್ರಕರಣ ದಾಖಲಿಸುವಂತಿಲ್ಲ. ಭೂಕಬಳಿಕೆ ವಿಚಾರಣೆ ನಡೆಸುವ ಅಧಿಕಾರವನ್ನು ಸಿವಿಲ್ ನ್ಯಾಯಾಲಯದಿಂದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲು ಈ ಸುಗ್ರೀವಾಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.