ಮುಂಬೈ: ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯಲ್ಲಿ ಏರಿಕೆ ಆದರೆ ಸರ್ಕಾರಕ್ಕೆ ಇಂಧನದ ಮೇಲಿನ ಸೆಸ್ಅನ್ನು ಲೀಟರಿಗೆ ₹ 4.5ರವರೆಗೆ ತಗ್ಗಿಸಲು ಅವಕಾಶ ಸಿಗುತ್ತದೆ ಎಂದು ರೇಟಿಂಗ್ ಸಂಸ್ಥೆ ಐಸಿಆರ್ಎ ಹೇಳಿದೆ.

2021–22ನೆಯ ಆರ್ಥಿಕ ವರ್ಷದಲ್ಲಿ ಪೆಟ್ರೋಲ್ ಬಳಕೆಯು ಶೇಕಡ 14ರಷ್ಟು, ಡೀಸೆಲ್ ಬಳಕೆಯು ಶೇ 10ರಷ್ಟು ಹೆಚ್ಚಳ ಆಗುವ ಅಂದಾಜು ಇದೆ ಎಂದು ಐಸಿಆರ್ಎ ಹೇಳಿದೆ. ಇದರಿಂದಾಗಿ ಸರ್ಕಾರಕ್ಕೆ ಹೆಚ್ಚುವರಿಯಾಗಿ ₹ 40 ಸಾವಿರ ಕೋಟಿ ಆದಾಯ ಸಿಗಲಿದೆ.

ಈ ಹೆಚ್ಚುವರಿ ಆದಾಯವನ್ನು ಬಿಟ್ಟುಕೊಡಲು ಸರ್ಕಾರ ಮನಸ್ಸು ಮಾಡಿದಲ್ಲಿ, ಅದು ತೈಲೋತ್ಪನ್ನಗಳ ಮೇಲಿನ ಸೆಸ್ಅನ್ನು ಲೀಟರಿಗೆ ₹ 4.5ರಷ್ಟು ಕಡಿಮೆ ಮಾಡಬಹುದು. ಆ ಮೂಲಕ ಹಣದುಬ್ಬರ ನಿಯಂತ್ರಿಸಲು ನೆರವು ನೀಡಬಹುದು ಎಂದು ಐಸಿಆರ್ಎ ಅಭಿಪ್ರಾಯ ವ್ಯಕ್ತಪಡಿಸಿದೆ.

2020ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಭಾರಿ ಇಳಿಕೆ ಕಂಡಾಗ ಸರ್ಕಾರವು ಹೆಚ್ಚುವರಿ ಆದಾಯ ಸಂಗ್ರಹಿಸುವ ಉದ್ದೇಶದಿಂದ ತೈಲೋತ್ಪನ್ನಗಳ ಮೇಲೆ ಸೆಸ್ ವಿಧಿಸಲು ಆರಂಭಿಸಿತು. ಈಗ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆ ಆಗಿದ್ದರೂ ಸರ್ಕಾರವು ಸೆಸ್ ಪ್ರಮಾಣವನ್ನು ತಗ್ಗಿಸಿಲ್ಲ. ಇದರಿಂದಾಗಿ ಗ್ರಾಹಕರಿಗೆ ತೈಲೋತ್ಪನ್ನಗಳು ತುಟ್ಟಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.