ಬೆಂಗಳೂರು: ವಾಣಿಜ್ಯ ವಹಿವಾಟುಗಳನ್ನು ಹಂತಹಂತವಾಗಿ ಪುನರಾ ರಂಭಿಸಲು ಅನುಮತಿ ನೀಡಿರುವುದು ದೇಶದಲ್ಲಿ ನೇಮಕಾತಿ ಪ್ರಕ್ರಿಯೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಿದೆ. ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಂಪನಿಯನ್ನು ಮುನ್ನಡೆಸಲು ಅನುಭವಿ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ.

ನೇಮಕಾತಿಯ ಬಗ್ಗೆ ಕಂಪನಿಗಳು ಹೊಂದಿರುವ ಆಸಕ್ತಿಯು ಮಾರ್ಚ್ 25ರಿಂದ ಜೂನ್ 7ರವರೆಗಿನ ಲಾಕ್ ಡೌನ್ ಅವಧಿಯಲ್ಲಿ ಶೇ 11ರಷ್ಟಿತ್ತು. ಇದು ಏಪ್ರಿಲ್–ಸೆಪ್ಟೆಂಬರ್ ಅವಧಿಯಲ್ಲಿ ಶೇ 18ಕ್ಕೆ ಏರಿಕೆಯಾಗಲಿದೆ.

ಮಹಾನಗರ ಮತ್ತು 1ನೇ ಶ್ರೇಣಿಯ ನಗರಗಳಲ್ಲಿ ತಾಸುಗಳ ಲೆಕ್ಕದಲ್ಲಿ ಕೆಲಸ ಮಾಡುವ ಕಾರ್ಮಿಕರು (ಬ್ಲೂ ಕಾಲರ್ ಲೇಬರ್) ಮತ್ತು ಹಿರಿಯ ಅಧಿಕಾರಿಗಳ ನೇಮಕಕ್ಕೆ ಕಂಪನಿಗಳು ಹೆಚ್ಚು ಗಮನ ನೀಡುತ್ತಿವೆ ಎಂದು ಮಾನವ ಸಂಪನ್ಮೂಲ ಕಂಪನಿ ಟೀಮ್‌ಲೀಸ್ ಸರ್ವೀಸಸ್ ನಡೆಸಿರುವ ಉದ್ಯೋಗ ಮುನ್ನೋಟ ವರದಿ (2020–21ರ ಏಪ್ರಿಲ್–ಸೆಪ್ಟೆಂಬರ್) ತಿಳಿಸಿದೆ.

21 ವಲಯಗಳ ಚಟುವಟಿಕೆ ವಿಶ್ಲೇಷಿಸಿ ವರದಿ ಸಿದ್ಧಪಡಿಸಲಾಗಿದೆ. ಕೋವಿಡ್ ನಿಗ್ರಹಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಂದಾಗಿ ಆರು ವಲಯಗಳಲ್ಲಿ ನೇಮಕಾತಿ ಪ್ರಕ್ರಿಯೆ ಚೇತರಿಸಿಕೊಳ್ಳುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಮತ್ತು ಅನ್‌ಲಾಕ್ ಸಮಯದಲ್ಲಿ ಹೊಸಬರನ್ನು ನೇಮಿಸಿಕೊಳ್ಳುವ ಬಗ್ಗೆ ಕಂಪನಿಗಳು ಹೊಂದಿರುವ ಧೋರಣೆಯಲ್ಲೂಬದಲಾವಣೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.