ಬೆಂಗಳೂರು: ಜಪಾನ್ನ ಕಾರು ತಯಾರಿಕಾ ಕಂಪನಿ ಹೋಂಡಾ, ಕಾರಿನ ಬಿಡಿ ಭಾಗಗಳ ಗೋದಾಮಿನ (ವೇರ್ಹೌಸ್) ಭೂಮಿ ಪೂಜೆಯನ್ನು ದೊಡ್ಡಬಳ್ಳಾಪುರದಲ್ಲಿ ಸೋಮವಾರ ನೆರವೇರಿಸಿತು.

ಹೋಂಡಾ ಕಾರ್ಸ್ ಇಂಡಿಯಾದಿಂದ ನಿರ್ವಹಿಸಲಿರುವ ಈ ಗೋದಾಮು, ಹೋಂಡಾ ಕಾರ್ಸ್ ಇಂಡಿಯಾ, ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಮತ್ತು ಹೋಂಡಾ ಇಂಡಿಯಾ ಪವರ್ ಪ್ರಾಡಕ್ಟ್ಸ್ ಸೇರಿದಂತೆ ಎಲ್ಲ ಹೋಂಡಾ ವಾಹನಗಳಿಗೆ ಬಿಡಿಭಾಗಗಳನ್ನು ಪೂರೈಸಲಿದೆ ಎಂದು ಕಂಪನಿ ತಿಳಿಸಿದೆ.

2026–27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಿದೆ. ಗೋದಾಮನ್ನು ಸುಮಿಟೊಮೊ ಮಿಟ್ಸುಯಿ ಕನ್ಸ್ಟ್ರಕ್ಷನ್ ಕಂಪನಿ (ಎಸ್ಎಂಸಿಸಿ) ನಿರ್ಮಾಣ ಮಾಡಲಿದೆ. ಮೊದಲ ಹಂತದಲ್ಲಿ, 60 ಸಾವಿರ ಚದರ ಮೀಟರ್ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ 25 ಸಾವಿರ ಚದರ ಮೀಟರ್ ವ್ಯಾಪ್ತಿಯ ಕಟ್ಟಡವೂ ಒಳಗೊಂಡಿರುತ್ತದೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರಿಗೆ ಸಕಾಲದಲ್ಲಿ ಹೋಂಡಾ ವಾಹನದ ಬಿಡಿಭಾಗಗಳನ್ನು ಪೂರೈಸುವುದು ಮತ್ತು ತ್ವರಿತವಾಗಿ ಲಭ್ಯವಾಗುವಂತೆ ಮಾಡಲು ಗೋದಾಮು ಸ್ಥಾಪಿಸಲಾಗುತ್ತಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ತಾಕುಯಾ ತ್ಸುಮಾರಾ ಹೇಳಿದ್ದಾರೆ.

ಈ ಗೋದಾಮು ನಿರ್ಮಾಣ ಪೂರ್ಣಗೊಂಡರೆ ದೇಶದ ದಕ್ಷಿಣ ಭಾಗದಲ್ಲಿ ವಾಹನದ ಬಿಡಿಭಾಗಗಳನ್ನು ಪೂರೈಕೆ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.