ನವದೆಹಲಿ : ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಏಳು ನಗರಗಳಲ್ಲಿ ಪ್ರಸಕ್ತ ವರ್ಷದಲ್ಲಿ ಮನೆ ಮಾರಾಟವು ಶೇ 31ರಷ್ಟು ಹೆಚ್ಚಳವಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ಹೇಳಿದೆ.

2022ರಲ್ಲಿ ಈ ನಗರಗಳಲ್ಲಿ ಒಟ್ಟು 3,64,870 ಮನೆಗಳು ಮಾರಾಟವಾಗಿದ್ದವು. ಈ ವರ್ಷ 4,76,530 ಮನೆಗಳು ಮಾರಾಟವಾಗಿವೆ ಎಂದು ಗುರುವಾರ ಸಂಸ್ಥೆಯು ಬಿಡುಗಡೆಗೊಳಿಸಿರುವ ತನ್ನ ವಾರ್ಷಿಕ ವರದಿಯಲ್ಲಿ ವಿವರಿಸಿದೆ.

ಮುಂಬೈ, ಪುಣೆ, ದೆಹಲಿ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತ ಮತ್ತು ಚೆನ್ನೈ ನಗರದಲ್ಲಿನ ಮನೆಗಳ ಮಾರಾಟದ ಆಧಾರದ ಮೇಲೆ ಸಂಸ್ಥೆಯು ಈ ವರದಿ ಸಿದ್ಧಪಡಿಸಿದೆ.

2022ರಲ್ಲಿ ಬೆಂಗಳೂರಿನಲ್ಲಿ 49,480 ಮನೆಗಳ ಮಾರಾಟವಾಗಿತ್ತು. ಪ್ರಸಕ್ತ ವರ್ಷ ಈ ಸಂಖ್ಯೆ 63,980ಕ್ಕೆ ಮುಟ್ಟಿದೆ. ಒಟ್ಟಾರೆ ಮಾರಾಟವು ಶೇ 29ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಮುಂಬೈನಲ್ಲಿ ಅತಿಹೆಚ್ಚು ಮನೆಗಳು ಮಾರಾಟವಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟವು ಶೇ 40ರಷ್ಟು ಹೆಚ್ಚಳವಾಗಿದೆ. ಈ ನಗರದಲ್ಲಿ ಕಳೆದ ವರ್ಷ 1,09,730 ಮನೆಗಳು ಮಾರಾಟವಾಗಿದ್ದರೆ, ಈ ಬಾರಿ 1,53,870 ಮನೆಗಳು ಮಾರಾಟವಾಗಿವೆ.

ಪ್ರಸಕ್ತ ವರ್ಷ ಪುಣೆಯಲ್ಲಿ 57,245, ದೆಹಲಿ 63,710, ಹೈದರಾಬಾದ್ 61,715, ಕೋಲ್ಕತ್ತ 23,030 ಮತ್ತು ಚೆನ್ನೈನಲ್ಲಿ 21,630 ಮನೆಗಳು ಮಾರಾಟವಾಗಿವೆ.

‘ಗೃಹ ವಲಯದ ಪಾಲಿಗೆ ಇದು ಉತ್ತಮ ವರ್ಷವಾಗಿದೆ. ಜಾಗತಿಕ ಬಿಕ್ಕಟ್ಟು, ದೇಶೀಯವಾಗಿ ಆಸ್ತಿ ಮೌಲ್ಯ ಹೆಚ್ಚಳ ಹಾಗೂ ಗೃಹ ಸಾಲದ ಮೇಲಿನ ಬ್ಯಾಂಕ್‌ಗಳ ಬಡ್ಡಿದರ ಹೆಚ್ಚಳದ ನಡುವೆಯೂ ಈ ವಲಯ ಅತ್ಯುತ್ತಮ ಪ್ರಗತಿ ಸಾಧಿಸಿದೆ’ ಎಂದು ಅನರಾಕ್ ಸಂಸ್ಥೆಯ ಮುಖ್ಯಸ್ಥ ಅನುಜ್ ಪುರಿ ಹೇಳಿದ್ದಾರೆ.

ಖರೀದಿ ದರ ಎಷ್ಟು?

ಪ್ರಸಕ್ತ ವರ್ಷ ಈ ಏಳು ನಗರಗಳಲ್ಲಿ ಹೊಸ ಮನೆಗಳ ನಿರ್ಮಾಣವು ಶೇ 25ರಷ್ಟು ಹೆಚ್ಚಳವಾಗಿದೆ. ಒಟ್ಟು 445770 ಮನೆಗಳ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಅಲ್ಲದೇ ಮನೆ ಖರೀದಿಯ ಸರಾಸರಿ ದರವೂ ಹೆಚ್ಚಳವಾಗಿದೆ. ಹಿಂದಿನ ಸಾಲಿನಲ್ಲಿ ಒಂದು ಚದರ ಅಡಿಗೆ ₹6150 ಇತ್ತು. ಈ ವರ್ಷ ₹7080ಕ್ಕೆ ಮುಟ್ಟಿದೆ ಎಂದು ಹೇಳಿದೆ. ಬೇಡಿಕೆ ಹಾಗೂ ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಈ ನಗರಗಳಲ್ಲಿ ಮನೆಗಳ ಬೆಲೆಯು ಶೇ 10ರಿಂದ 24ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಹೈದರಾಬಾದ್‌ನಲ್ಲಿ ಸರಾಸರಿ ದರ ಶೇ 24ರಷ್ಟು ಹೆಚ್ಚಳವಾಗಿದೆ ಎಂದು ವರದಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.