ಬೆಂಗಳೂರು: ಪೀಠೋಪಕರಣಗಳ ಮಾರಾಟ ಕಂಪನಿ, ಸ್ವೀಡನ್ ಮೂಲದ ಐಕಿಯಾ ಬೆಂಗಳೂರಿನ ಮಾರುಕಟ್ಟೆಯನ್ನು ಗುರುವಾರ ಪ್ರವೇಶಿಸಿದೆ. ಆರಂಭಿಕ ಹಂತದಲ್ಲಿ ಕಂಪನಿಯು ಆನ್ಲೈನ್ ಮಾರುಕಟ್ಟೆಯ ಮೂಲಕ ಗ್ರಾಹಕರಿಗೆ ಪೀಠೋಪಕರಣಗಳ ಮಾರಾಟ ಮಾಡಲಿದೆ.

ಕಂಪನಿಯು 2018ರಲ್ಲಿ ಹೈದರಾಬಾದ್ನಲ್ಲಿ ಬೃಹತ್ ಮಳಿಗೆ ಆರಂಭಿಸಿತ್ತು. 2020ರ ಡಿಸೆಂಬರ್ನಲ್ಲಿ ಮುಂಬೈಯಲ್ಲಿ ಎರಡನೇ ಮಳಿಗೆ ತೆರೆದಿತ್ತು. ಈಚೆಗೆ ಗುಜರಾತ್ನಲ್ಲಿ ಆನ್ಲೈನ್ ಮೂಲಕ ಪೀಠೋಪಕರಣಗಳ ಮಾರಾಟ ಆರಂಭಿಸಿದೆ.

‘ಐಕಿಯಾ ಆನ್ಲೈನ್ ಮಳಿಗೆಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಪೀಠೋಪಕರಣಗಳು ಲಭ್ಯವಿವೆ. ಬೆಂಗಳೂರಿನ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ ಉತ್ಪನ್ನಗಳು ಇರಲಿವೆ’ ಎಂದು ಪ್ರಕಟಣೆ ತಿಳಿಸಿದೆ.

ಐಕಿಯಾ ಕಂಪನಿಯ ಭಾರತದ ವ್ಯವಹಾರಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪೀಟರ್ ಬೆತ್ಸೆಲ್ ಅವರು, ‘ಕಂಪನಿಯು ಒಂದು ವರ್ಷದೊಳಗೆ ಬೆಂಗಳೂರಿನ ನಾಗಸಂದ್ರದಲ್ಲಿ ಸುಮಾರು ನಾಲ್ಕು ಲಕ್ಷ ಚದರ ಅಡಿಗಳಷ್ಟು ವಿಶಾಲವಾಗಿರುವ ಬೃಹತ್ ಮಳಿಗೆಯನ್ನು ತೆರೆಯಲಿದೆ. ಈ ಮಳಿಗೆಯು ನಾಗಸಂದ್ರ ಮೆಟ್ರೊ ರೈಲು ನಿಲ್ದಾಣದೊಂದಿಗೆ ಸಂಪರ್ಕ ಹೊಂದಿರಲಿದೆ. ನಂತರದಲ್ಲಿ, ಇನ್ನಷ್ಟು ಗ್ರಾಹಕರನ್ನು ತಲುಪಲು ನಗರದ ಮಧ್ಯಭಾಗದಲ್ಲಿಯೂ ನಾವು ಮಳಿಗೆ ಆರಂಭಿಸಲಿದ್ದೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.