ಬೆಂಗಳೂರು: ದೇಶದ ದಿನಸಿ ವ್ಯಾಪಾರಿಗಳ ವಹಿವಾಟು ಸುಲಭಗೊಳಿಸುವ ಸಲುವಾಗಿ ಅಭಿವೃದ್ಧಿಪಡಿಸಿರುವ ಇಂಪ್ರೆಸ್ (Imprezz) ಎನ್ನುವ ಮೊಬೈಲ್ ಆ್ಯಪ್ ಅನ್ನು ಜರ್ಮನಿಯ ಬುಹ್ಲ್ ಕಂಪನಿಯು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.

ವ್ಯಾಪಾರಸ್ಥರು ತಮ್ಮ ಅಂಗಡಿ ವ್ಯಾಪಾರದಲ್ಲಿ ಪಾರದರ್ಶಕತೆ, ದಾಸ್ತಾನು ನಿರ್ವಹಣೆ, ಬಿಲ್ಲಿಂಗ್, ಪಾವತಿ ಸಂಗ್ರಹ, ಗ್ರಾಹಕರ ಮಾಹಿತಿ ನಿರ್ವಹಣೆ ಸೇರಿದಂತೆ ಇನ್ನೂ ಹಲವು ಕೆಲಸಗಳನ್ನು ಈ ಆ್ಯಪ್ ಮೂಲಕ ಸುಲಭವಾಗಿ ಮಾಡಬಹುದಾಗಿದೆ. ಉತ್ಪನ್ನಗಳ ಮೆಲೆ ಇರುವ ಬಾರ್ ಕೋಡ್ ಸ್ಕಾನ್ ಮಾಡುವುದರ ಮೂಲಕ ಬಿಲ್ನ ಪ್ರಿಂಟ್ ಔಟ್ ಅಥವಾ ಮೆಸೆಜ್ ಮಾಡುವ ಸೌಲಭ್ಯ ಇದರಲ್ಲಿದೆ ಎಂದು ಕಂಪನಿಯು ತಿಳಿಸಿದೆ.

ಆ್ಯಪ್ನಲ್ಲಿ ಇರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್) ವ್ಯವಸ್ಥೆಯು ವ್ಯಾಪಾರಸ್ಥರು ಮತ್ತು ಗ್ರಾಹಕರು ಉಪಯುಕ್ತವಾಗಿದೆ. ಗ್ರಾಹಕರಿಗೆ ಉತ್ತಮ ಗ್ರಾಹಕ ಶಾಪಿಂಗ್ ಅನುಭವವನ್ನು ನೀಡುವುದರ ಜೊತೆಗೆ ಅವರ ದಿನನಿತ್ಯದ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಆ್ಯಪ್ ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ನೊಂದಿಗೆ, ಮಳಿಗೆಗಳು ಈಗ ಸಾಂಪ್ರದಾಯಿಕ ವಿಧಾನದ ಬಿಲ್ಲಿಂಗ್,ಇನ್ವಾಯ್ಸ್ ಮತ್ತು ದಿನನಿತ್ಯದ ವಹಿವಾಟು ಇತರ ಪ್ರಕ್ರಿಯೆಗಳನ್ನು ಈಗ ಸುಲಭವಾಗಿ ಡಿಜಿಟಲಿಕರಣ ಮಾಡಬಹುದು. ಈ ಮೂಲಕ ವ್ಯಾಪಾರವನ್ನು ಹೇಗೆ ಬೆಳೆಸುವುದರ ಮೇಲೆ ಹೆಚ್ಚು ಗಮನಹರಿಸಬಹುದು ಎಂದು ಬುಹ್ಲ್ ಡೇಟಾ ಸರ್ವೀಸ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಅಮಿತ್ ಮುಂದ್ರಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.