ನವದೆಹಲಿ: ಕಚ್ಚಾ ತೈಲ ಆಮದು ವಿಚಾರದಲ್ಲಿ ಕೆಲವೇ ದೇಶಗಳನ್ನು ನೆಚ್ಚಿಕೊಳ್ಳುವುದು ಬೇಡ ಎಂದು ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದ ತೈಲ ಮಾರಾಟ ಕಂಪನಿಗಳಿಗೆ ಹೇಳಿದೆ. ಕಚ್ಚಾ ತೈಲ ಉತ್ಪಾದನೆಯನ್ನು ಏಪ್ರಿಲ್ ತಿಂಗಳಿನಲ್ಲಿಯೂ ಹೆಚ್ಚಿಸುವುದು ಬೇಡ ‘ಒಪೆಕ್+’ ದೇಶಗಳು ತೀರ್ಮಾನಿಸಿದ ನಂತರ, ತೈಲಕ್ಕಾಗಿ ಮಧ್ಯಪ್ರಾಚ್ಯದ ಮೇಲಿನ ಅವಲಂಬನೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವಂತೆ ಸರ್ಕಾರವು ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಭಾರತವು ತೈಲವನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿದೆ. ಭಾರತಕ್ಕೆ ಅಗತ್ಯವಿರುವ ಒಟ್ಟು ತೈಲದಲ್ಲಿ ಶೇಕಡ 84ರಷ್ಟು ಹೊರರಾಷ್ಟ್ರಗಳಿಂದ ಆಮದಾಗುತ್ತದೆ. ಆಮದಿನ ಪೈಕಿ ಶೇ 60ರಷ್ಟು ಮಧ್ಯಪ್ರಾಚ್ಯದ ದೇಶಗಳಿಂದ ಬರುತ್ತದೆ. ಪಾಶ್ಚಿಮಾತ್ಯ ದೇಶಗಳಿಂದ ಬರುವ ತೈಲಕ್ಕಿಂತಲೂ ಮಧ್ಯಪ್ರಾಚ್ಯದ ದೇಶಗಳು ಮಾರಾಟ ಮಾಡುವ ತೈಲ ತುಸು ಅಗ್ಗ.

‘ತೈಲ ಆಮದಿನ ವಿಚಾರದಲ್ಲಿ ಬೇರೆ ಬೇರೆ ಮೂಲಗಳನ್ನು ಕಂಡುಕೊಳ್ಳುವಂತೆ ನಾವು ಕಂಪನಿಗಳಿಗೆ ಹೇಳಿದ್ದೇವೆ. ತೈಲ ಉತ್ಪಾದನೆಯಲ್ಲಿ ತೊಡಗಿರುವ ಮಧ್ಯಪ್ರಾಚ್ಯದ ದೇಶಗಳು ನಮ್ಮನ್ನು ಒತ್ತೆಯಾಳುಗಳಂತೆ ನೋಡಲು ನಾವು ಅವಕಾಶ ನೀಡುವುದಿಲ್ಲ. ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿವಾರಣೆ ಆಗಬೇಕು ಎಂದು ಆ ದೇಶಗಳು ಬಯಸಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೆವು’ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದರು.

ಕೋವಿಡ್–19 ಕಾರಣದಿಂದಾಗಿ ಕಚ್ಚಾ ತೈಲದ ಬೇಡಿಕೆಯು ಕುಸಿದುಬಿದ್ದಿದ್ದಾಗಲೂ ಭಾರತವು ಮಧ್ಯಪ್ರಾಚ್ಯದ ದೇಶಗಳಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿರಲಿಲ್ಲ ಎಂದು ಅವರು ತಿಳಿಸಿದರು. ಆದರೆ, ಏಪ್ರಿಲ್‌ನಿಂದ ಉತ್ಪಾದನೆ ಹೆಚ್ಚಿಸಬೇಕು ಎಂದು ಭಾರತ ಮಾಡಿಕೊಂಡ ಮನವಿಯನ್ನು ಒಪೆಕ್ ದೇಶಗಳು ಪುರಸ್ಕರಿಸಿಲ್ಲ.

ಬೇರೆ ದೇಶಗಳಿಂದ ತೈಲ ಆಮದು ಮಾಡಿಕೊಳ್ಳುವುದರಿಂದ ಆರಂಭಿಕ ಹಂತದಲ್ಲಿ ಹೆಚ್ಚು ಹಣ ಪಾವತಿಸಬೇಕಾಗಿ ಬಂದರೂ, ಭವಿಷ್ಯದಲ್ಲಿ ಇದು ದೇಶಕ್ಕೆ ಪ್ರಯೋಜನ ತಂದುಕೊಡಲಿದೆ ಎಂದು ಆ ಅಧಿಕಾರಿ ಹೇಳಿದರು. ಸರ್ಕಾರದಿಂದ ಈ ರೀತಿಯ ಸೂಚನೆ ಬಂದಿರುವುದು ಹೌದು ಎಂದು ಎರಡು ತೈಲ ಸಂಸ್ಕರಣಾ ಘಟಕಗಳು ಖಚಿತಪಡಿಸಿವೆ.

ಗಯಾನಾದಿಂದ ತೈಲ ಆಮದು ಮಾಡಿಕೊಳ್ಳುವ ಆಲೋಚನೆ ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ನವೀಕರಿಸಿದೆ ಎಂದು ಮೂಲಗಳು ಹೇಳಿವೆ. ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಈ ವರ್ಷದಿಂದ ಮತ್ತೆ ಆರಂಭಿಸಬಹುದು ಎಂಬ ಭರವಸೆ ಕೇಂದ್ರಕ್ಕಿದೆ. ಈ ವಿಚಾರವಾಗಿ ಸುದ್ದಿಸಂಸ್ಥೆ ಕೇಳಿದ್ದ ಪ್ರತಿಕ್ರಿಯೆಗೆ ಪೆಟ್ರೋಲಿಯಂ ಸಚಿವಾಲಯ ಹಾಗೂ ಇಂಡಿಯನ್ ಆಯಿಲ್ ಸ್ಪಂದಿಸಿಲ್ಲ.

ಭಾರತಕ್ಕೆ ಈಗ ತೈಲ ಪೂರೈಕೆ ಮಾಡುತ್ತಿರುವ ದೇಶಗಳ ಪೈಕಿ ಇರಾಕ್ ಹಾಗೂ ಸೌದಿ ಅರೇಬಿಯಾ ಮುಂಚೂಣಿ ಸ್ಥಾನಗಳಲ್ಲಿವೆ. ‘ಹೊಸ ಆರಂಭವೊಂದನ್ನು ಮಾಡಲೇಬೇಕಿದೆ. ಕಿರು ಅವಧಿಯ ಖರೀದಿ ಒಪ್ಪಂದಗಳನ್ನು ಬೇರೆ ಬೇರೆ ದೇಶಗಳೊಂದಿಗೆ ಮಾಡಿಕೊಳ್ಳುವ ಪ್ರಯತ್ನವನ್ನು ನಾವು ನಡೆಸಿದ್ದೇವೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.