ನವದೆಹಲಿ (ಪಿಟಿಐ): ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಮತ್ತು ಲಭ್ಯತೆ ಸುಧಾರಿಸಲು 2024ರ ಮಾರ್ಚ್ 31ರವರೆಗೂ ರಫ್ತು ಮಾಡುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು ಈ ಕುರಿತು ಪ್ರಕಟಣೆ ಹೊರಡಿಸಿದೆ. ಈ ಆದೇಶ ಹೊರಬೀಳುವುದಕ್ಕೂ ಮುನ್ನ ಆಗಿರುವ ರಫ್ತು ಒಪ್ಪಂದಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಚಿಲ್ಲರೆ ಮಾರಾಟದ ದರ ಕೆ.ಜಿಗೆ ₹70–80ರವರೆಗೆ ಇದೆ.

ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈರುಳ್ಳಿ ಬೆಲೆ ಹೆಚ್ಚಿರುವ ರಾಜ್ಯಗಳಲ್ಲಿ ತನ್ನ ಬಳಿ ಇರುವ ಹೆಚ್ಚುವರಿ ದಾಸ್ತಾನನ್ನು ಕೆ.ಜಿಗೆ ₹25ರಂತೆ ಮಾರಾಟ ಮಾಡುತ್ತಿದೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ 1ರಿಂದ ಆಗಸ್ಟ್ 4ರವರೆಗಿನ ಅವಧಿಯಲ್ಲಿ 9.75 ಲಕ್ಷ ಟನ್ನಷ್ಟು ಈರುಳ್ಳಿ ರಫ್ತು ಮಾಡಲಾಗಿದೆ.
.Onion Price | ಈರುಳ್ಳಿ: ತಗ್ಗಲೇ ಇಲ್ಲ ಚಿಲ್ಲರೆ ದರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.