ದೇಶೀಯ ಚಟುವಟಿಕೆ ಚೇತರಿಕೆ ಕಂಡಿದೆ. ಇದು ತಯಾರಿಕಾ ಮತ್ತು ಸೇವಾ ವಲಯದ ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ. ಬೇಡಿಕೆ ವಿಸ್ತರಣೆ ಹಾಗೂ ಹೊಸ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ತಯಾರಿಕಾ ವಲಯದ ಬೆಳವಣಿಗೆ ಸದೃಢವಾಗಿದೆ ಎಂದು ತಿಳಿಸಿದೆ. ವರಮಾನ ಸಂಗ್ರಹದಲ್ಲಿ ಏರಿಕೆಯಾಗಿದೆ. ಸರ್ಕಾರವು ವೆಚ್ಚದಲ್ಲಿ ಶಿಸ್ತು ಕಾಪಾಡಿಕೊಂಡಿದೆ. ಆರ್ಥಿಕತೆಯ ದೃಢವಾಗಿರುವುದರಿಂದ ವಿತ್ತೀಯ ಕೊರತೆಯು ಬಜೆಟ್‌ನಲ್ಲಿ ಅಂದಾಜಿಸಿರುವ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರಕು ಮತ್ತು ಸೇವಾ ರಫ್ತು ಉತ್ತಮವಾಗಿದೆ. ಷೇರು ಮಾರುಕಟ್ಟೆಗಳಲ್ಲಿ ಉತ್ತಮ ಮಟ್ಟ ಕಾಯ್ದುಕೊಂಡಿವೆ. ವಿದೇಶಿ ನೇರ ಬಂಡವಾಳ ಹೂಡಿಕೆಯು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.