ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಆಹಾರ ಸೇವೆಗಳ ವರದಿ ಬಿಡುಗಡೆ

Published 21 ಜುಲೈ 2024, 17:54 IST
Last Updated 21 ಜುಲೈ 2024, 17:54 IST
ಅಕ್ಷರ ಗಾತ್ರ

ಬೆಂಗಳೂರು: 2024ರಿಂದ 2028ರ ವರೆಗೆ ದೇಶದ ಆಹಾರ ಕ್ಷೇತ್ರವು ಶೇ 8.1ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್‌) ದಾಖಲಿಸಲಿದೆ. ಸಂಘಟಿತ ಕ್ಷೇತ್ರವು ಶೇ 13.2ರಷ್ಟು ಬೆಳೆಯಲಿದೆ ಎಂದು ಭಾರತೀಯ ಆಹಾರ ಸೇವೆಗಳ ವರದಿ ತಿಳಿಸಿದೆ.

ಆಹಾರ ಸೇವೆಗಳ ಕ್ಷೇತ್ರದ ಗಾತ್ರವು ಭಾರತೀಯ ಸಿನಿಮಾ ಕ್ಷೇತ್ರಕ್ಕಿಂತ 33 ಪಟ್ಟು, ಭಾರತದ ಹೋಟೆಲ್‌ ಉದ್ದಿಮೆಗಿಂತ 2 ಪಟ್ಟು ಮತ್ತು ಭಾರತದ ಔಷಧ ತಯಾರಿಕಾ ಉದ್ದಿಮೆಗಿಂತ 1 ಪಟ್ಟು ದೊಡ್ಡದಾಗಿದೆ.

ಇಲ್ಲಿಯವರೆಗೆ ವಲಯವು 85.5 ಲಕ್ಷ ಉದ್ಯೋಗ ಸೃಷ್ಟಿಸಿದ್ದು, 2028ರ ವೇಳೆಗೆ 103 ಲಕ್ಷಕ್ಕೆ ಏರಿಕೆಯಾಗುವ ಅಂದಾಜಿದೆ. ದೇಶದ ಜಿಎಸ್‌ಟಿಗೆ ಶೇ 1.4ರಷ್ಟು ಕೊಡುಗೆ ನೀಡುತ್ತಿದೆ ಎಂದು ಭಾರತೀಯ ರಾಷ್ಟ್ರೀಯ ರೆಸ್ಟಾರೆಂಟ್‌ ಸಂಘ (ಎನ್‌ಆರ್‌ಎಐ) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

‘ಬೆಂಗಳೂರು ಆಹಾರ ಸೇವೆಗಳ ಉದ್ದಿಮೆಯ ಸಂಘಟಿತ ವರ್ಗವು ₹26,475 ಕೋಟಿ ಮೌಲ್ಯದ್ದಾಗಿದೆ. ಮುಂಬೈ ಮತ್ತು ನವದೆಹಲಿ ನಂತರ ಮೂರನೇ ಸ್ಥಾನದಲ್ಲಿದೆ. ಬೆಂಗಳೂರಲ್ಲಿ ಒಟ್ಟು 1.10 ಲಕ್ಷ ರೆಸ್ಟಾರೆಂಟ್‌ (ಸಂಘಟಿತ ಮತ್ತು ಅಸಂಘಟಿತ) ಇವೆ’ ಎಂದು ಎನ್‌ಆರ್‌ಎಐನ ಬೆಂಗಳೂರು ಚಾಪ್ಟರ್‌ನ ಮುಖ್ಯಸ್ಥ ಎಂ.ಡಿ. ಚೇತನ್‌ ಹೆಗ್ಡೆ ಹೇಳಿದ್ದಾರೆ.

ದೇಶದ 40 ನಗರಗಳಲ್ಲಿನ ರೆಸ್ಟಾರೆಂಟ್‌ಗಳು, 140ಕ್ಕೂ ಹೆಚ್ಚು ಸಿಇಒಗಳು ಮತ್ತು 5,300ಕ್ಕೂ ಹೆಚ್ಚಿನ ಗ್ರಾಹಕರೊಂದಿಗಿನ ಸಂವಾದ ನಂತರ ಈ ವರದಿ ಸಿದ್ಧಪಡಿಸಲಾಗಿದೆ .

ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಎನ್‌ಆರ್‌ಎಐನ ಬೆಂಗಳೂರು ಕೋ-ಚಾಪ್ಟರ್ ಮುಖ್ಯಸ್ಥೆ ಮೇಘನಾ ವಕದ, ಎನ್‌ಕೆಪಿ ಎಂಪೈರ್ ವೆಂಚರ್ಸ್ ನಿರ್ದೇಶಕ ಹಾಗೂ ಸಿಇಒ ಶಕೀತ್ ಹಖ್, ಪಿಜ್ಜಾ ಬೇಕರಿ ಮತ್ತು ಪ್ಯಾರಿಸ್ ಪಾಣಿನಿಯ ಸಹ ಸ್ಥಾಪಕ ನಿಖಿಲ್ ಗುಪ್ತ, ಟ್ರಫಲ್ಸ್ ಹಾಸ್ಪಿಟಾಲಿಟಿ ನಿರ್ವಾಹಕ ನಿರ್ದೇಶಕ ಅವಿನಾಶ್ ಬಜಾಜ್, ಪಿಎಚ್‌4 ಫುಡ್ ಆ್ಯಂಡ್‌ ಬೆವರೇಜಸ್ ಪ್ರೈವೇಟ್ ಲಿಮಿಟೆಡ್‌ನ ಸಹಸ್ಥಾಪಕ ಮತ್ತು ನಿರ್ದೇಶಕ ಮುಕೇಶ್ ತೊಲಾನಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT