ಹೈದರಾಬಾದ್ : ‘ಭಾರತದ ಆರ್ಥಿಕತೆ ಬೆಳವಣಿಗೆಯು ವಾರ್ಷಿಕವಾಗಿ ಶೇ 7ರಿಂದ 8ರಷ್ಟು ಪ್ರಗತಿ ಸಾಧಿಸಿದರಷ್ಟೇ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಸಿ. ರಂಗರಾಜನ್ ಹೇಳಿದ್ದಾರೆ.

‘ದೇಶದಲ್ಲಿನ ಅಸಮಾನತೆ ಅಥವಾ ಬಡತನದ ನಿರ್ಮೂಲನೆಗೆ ಹೊಸ ಆವಿಷ್ಕಾರವೊಂದೇ ಪರಿಹಾರವಲ್ಲ. ಆರ್ಥಿಕತೆಯ ಕ್ಷಿಪ್ರಗತಿ ಬೆಳವಣಿಗೆಗಾಗಿ ಸಾಮಾಜಿಕ ಭದ್ರತೆಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ತಲಾ ಆದಾಯವು ₹10.78 ಲಕ್ಷ (13 ಸಾವಿರ ಅಮೆರಿಕನ್ ಡಾಲರ್) ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅಭಿವೃದ್ಧಿ ಹೊಂದಿದ ಆರ್ಥಿಕತೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಭಾರತದಲ್ಲಿ ತಲಾ ಆದಾಯವು ₹2.24 ಲಕ್ಷ (2,700 ಅಮೆರಿಕನ್ ಡಾಲರ್) ಇದೆ. ಇದು ಐದು ಪಟ್ಟು ಹೆಚ್ಚಾದರಷ್ಟೇ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಲು ಸಾಧ್ಯ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.