ನವದೆಹಲಿ: ಅಮೆರಿಕದಿಂದ ಆಮದಾಗುವ ಕಡಲೆ, ಚೆನ್ನಂಗಿ ಬೇಳೆ (ಮಸೂದರ್ ದಾಲ್), ಬಾದಾಮಿ, ಅಕ್ರೋಟ್ (ವಾಲ್ನಟ್) ಮತ್ತು ಸೇಬು ಮೇಲೆ ವಿಧಿಸಿದ್ದ ಹೆಚ್ಚುವರಿ ಸುಂಕವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.

ಕಡಲೆ ಮೇಲಿನ ಶೇಕಡ 10ರಷ್ಟು ಸುಂಕ, ಚೆನ್ನಂಗಿ ಬೇಳೆ (ಶೇ 20ರಷ್ಟು), ಬಾದಾಮಿ (ಕೆ.ಜಿಗೆ ₹7) ಮತ್ತು ಚಿಪ್ಪು ಸಹಿತ ಬಾದಾಮಿ (ಕೆ.ಜಿಗೆ ₹20), ಅಕ್ರೋಟ್ (ಶೇ 20) ಹಾಗೂ ಸೇಬಿಗೆ (ಶೇ 20ರಷ್ಟು) ಸುಂಕವನ್ನು ಕೈಬಿಡಲಾಗಿದೆ.

ಕೇಂದ್ರ ಹಣಕಾಸು ಸಚಿವಾಲಯವು ಸೆಪ್ಟೆಂಬರ್ 5ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ಈ ಉತ್ಪನ್ನಗಳ ಮೇಲಿನ ಸುಂಕವನ್ನು ಕೈಬಿಡುವ ಸೂಚನೆ ನೀಡಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಜಿ20 ಸಮಿತ್ನಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

2018ರಲ್ಲಿ ಅಮೆರಿಕವು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕೆಲವು ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಕ್ರಮವಾಗಿ ಶೇ 25ರಷ್ಟು ಮತ್ತು ಶೇ 10ರಷ್ಟು ಆಮದು ಸುಂಕ ವಿಧಿಸಿತು. ಇದಕ್ಕೆ ಪ್ರತಿಯಾಗಿ ಭಾರತವು 2019ರ ಜೂನ್ನಲ್ಲಿ ಅಮೆರಿಕದ 28 ಉತ್ಪನ್ನಗಳ ಮೇಲೆ ಆಮದು ಸುಂಕ ವಿಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.