ನವದೆಹಲಿ: ಭಾರತದ ವೃತ್ತಿಪರರು 2021ನೇ ವರ್ಷದ ಬಗ್ಗೆ ಆಶಾವಾದ ಹೊಂದಿದ್ದಾರೆ. ಹೊಸ ಉದ್ಯೋಗ ಸೃಷ್ಟಿಯು 2021ರಲ್ಲಿ ಹೆಚ್ಚಲಿದೆ ಎನ್ನುವುದು ವೃತ್ತಿಪರರ ಪೈಕಿಶೇಕಡ 40ರಷ್ಟು ಜನರ ನಿರೀಕ್ಷೆ.

ತಾವು ಕೆಲಸ ಮಾಡುತ್ತಿರುವ ಕಂಪನಿಗಳು ಮುಂದಿನ ಆರು ತಿಂಗಳಿನಲ್ಲಿ ಉತ್ತಮ ಬೆಳವಣಿಗೆ ಕಾಣಲಿವೆ ಎಂದು ವೃತ್ತಿಪರರಲ್ಲಿಶೇ 53ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿನ ಉದ್ಯೋಗಕ್ಕೆ ಸಂಬಂಧಿಸಿದ ವರದಿಯನ್ನು ವೃತ್ತಿಪರರ ಜಾಲತಾಣ ಲಿಂಕ್ಡ್‌ಇನ್ ಗುರುವಾರ ಬಿಡುಗಡೆ ಮಾಡಿದೆ. ಅನಿಶ್ಚಿತ ಸಂದರ್ಭದಲ್ಲಿಯೂ ಭಾರತದ ವೃತ್ತಿಪರರು ಆಶಾವಾದಿಗಳಾಗಿದ್ದು, ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ಒಟ್ಟಾರೆ ವಿಶ್ವಾಸ ಅಂಕವು 50ರಿಂದ 57ರ ಮಟ್ಟದಲ್ಲಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.

ಆನ್‌ಲೈನ್ ಕಲಿಕೆಗೆ ಹೆಚ್ಚು ಸಮಯ ನೀಡುವುದಾಗಿ ಶೇ 57ರಷ್ಟು ವೃತ್ತಿಪರರರು ಹೇಳಿದ್ದಾರೆ.

‘2020ನೇ ವರ್ಷವು ಬಹಳಷ್ಟು ಅಡ್ಡಿ–ಆತಂಕಗಳನ್ನು ಎದುರಿಸಿದೆ. 2021ನೇ ವರ್ಷವು ಊಹಿಸಲಾಗದ ಸವಾಲುಗಳನ್ನು ಮೆಟ್ಟಿನಿಲ್ಲಲು ಹಾಗೂ ಹೊಸ ವಾಸ್ತವಕ್ಕೆ ಸಜ್ಜುಗೊಳ್ಳಲು ನೆರವಾಗಲಿದೆ. ಕೆಲಸದ ಸ್ಥಳ, ವೃತ್ತಿ, ನೇಮಕಾತಿ, ವ್ಯವಹಾರ ಹಾಗೂ ನಾಯಕತ್ವದ ಶೈಲಿಯ ವಿಷಯಗಳಲ್ಲಿ ಕೆಲಸಗಳನ್ನು ಮರುರೂಪಿಸುವಂತೆ ಆಗಲಿದೆ’ ಎಂದು ಲಿಂಕ್ಡ್‌ಇನ್‌ನ ಭಾರತದ ವ್ಯವಸ್ಥಾಪಕ ಅಶುತೋಷ್ ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.