ನವದೆಹಲಿ: ಭಾರತದ ಅತ್ಯಂತ ದೊಡ್ಡ ತೈಲ ಕಂಪನಿ ಭಾರತೀಯ ತೈಲ ನಿಗಮವು (ಐಒಸಿ) ನವೀಕರಿಸಬಹುದಾದ ಇಂಧನ ಘಟಕಗಳ ಸ್ಥಾಪನೆಗೆ ₹1,660 ಕೋಟಿ ಹೂಡಿಕೆ ಮಾಡಲಿದೆ. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (ಎನ್‌ಟಿಪಿಸಿ) ಜೊತೆ ಸೇರಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ಐಒಸಿ ಮತ್ತು ಎನ್‌ಟಿಪಿಸಿ ಸೇರಿಕೊಂಡು ಜೂನ್‌ನಲ್ಲಿ 50:50 ಪಾಲುದಾರಿಕೆಯಲ್ಲಿ ಇಂಡಿಯನ್ ಆಯಿಲ್ ಎನ್‌ಟಿಪಿಸಿ ಗ್ರೀನ್ ಎನರ್ಜಿ ಪ್ರೈ. ಲಿ. ಎಂಬ ಕಂಪನಿಯನ್ನು ಸ್ಥಾಪಿಸಿವೆ. ತೈಲ ಕಂಪನಿಗಳ ಸಂಸ್ಕರಣಾಗಾರಗಳಿಗೆ ದಿನದ 24 ತಾಸು ವಿದ್ಯುತ್ ಪೂರೈಸುವುದಕ್ಕೆ ನವೀಕರಿಸಬಹುದಾದ ಇಂಧನ ಘಟಕಗಳನ್ನು ಸ್ಥಾಪಿಸುವುದು ಇದರ ಉದ್ದೇಶ.

ಸೌರಶಕ್ತಿ, ಪವನ ಶಕ್ತಿ ಮತ್ತು ಇತರ ನವೀಕರಿಸಬಹುದಾದ ಇಂಧನ ಘಟಕಗಳನ್ನು ಈ ಕಂಪನಿಯು ಸ್ಥಾಪಿಸಲಿದೆ. ಐಒಸಿಯ ಸಂಸ್ಕರಣಾಗಾರಗಳಿಗಾಗಿ ಕನಿಷ್ಠ 650 ಮೆಗಾವಾಟ್ ಸಾಮರ್ಥ್ಯದ ಘಟಕ ಸ್ಥಾಪನೆಯ ಗುರಿಯನ್ನು ಇರಿಸಿಕೊಳ್ಳಲಾಗಿದೆ.

ಎನ್‌ಟಿಪಿಸಿ ತನ್ನ ಅಂಗಸಂಸ್ಥೆಯಾದ ಎನ್‌ಜಿಇಎಲ್ ಮೂಲಕ ಮುಂದಿನ ಒಂದು ದಶಕದಲ್ಲಿ 60 ಗಿಗಾವಾಟ್ ಸಾಮರ್ಥ್ಯದ ನವೀಕರಿಸಬಹುದಾದ ಘಟಕಗಳ ಸ್ಥಾಪನೆಯ ಗುರಿಯನ್ನು ಹಾಕಿಕೊಂಡಿದೆ.

ಐಒಸಿ ಕೂಡ ಇಂತಹುದೇ ಗುರಿಯನ್ನು ಹೊಂದಿದೆ. 2025ರೊಳಗೆ 3 ಗಿಗಾ ವಾಟ್ ನವೀಕರಿಸಬಹುದಾದ ಇಂಧನ ಘಟಕ ಮತ್ತು 6 ಲಕ್ಷ ಟನ್ ಜೈವಿಕ ಇಂಧನ ಉತ್ಪಾದನೆಯ ಗುರಿ ಇರಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.