ನವದೆಹಲಿ: ದೇಶದ ರಫ್ತು ವಹಿವಾಟು 2022–23ನೇ ಹಣಕಾಸು ವರ್ಷದಲ್ಲಿ ಶೇ 6ರಷ್ಟು ಹೆಚ್ಚಾಗಿ ₹36.65 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಗುರುವಾರ ಮಾಹಿತಿ ನೀಡಿದ್ದಾರೆ.

ಪೆಟ್ರೋಲಿಯಂ, ಔಷಧ, ರಾಸಾಯನಿಕ ಮತ್ತು ಸಾಗರೋತ್ತರ ಉತ್ಪನ್ನಗಳ ರಫ್ತು ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ಆಮದು ವಹಿವಾಟು ಕೂಡಾ 2022–23ನೇ ಹಣಕಾಸು ವರ್ಷದಲ್ಲಿ ಶೇ 16.5ರಷ್ಟು ಹೆಚ್ಚಾಗಿದ್ದು ₹58.54 ಲಕ್ಷ ಕೋಟಿಗೆ ತಲುಪಿದೆ.

ಸೇವೆಗಳ ರಫ್ತು ವಹಿವಾಟು ಶೇ 27.16ರಷ್ಟು ಹೆಚ್ಚಾಗಿ ₹26.48 ಲಕ್ಷ ಕೋಟಿಗೆ ತಲುಪಿದೆ. 2021–22ರಲ್ಲಿ ₹20.82 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ರಫ್ತು ವಲಯದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು, ತಂಬಾಕು, ಎಣ್ಣೆ ಕಾಳುಗಳು, ಅಕ್ಕಿ, ಕಾಫಿ, ಹಣ್ಣು ಮತ್ತು ತರಕಾರಿ, ಔಷಧ, ರಾಸಾಯನಿಕ ವಲಯಗಳು ಉತ್ತಮ ಬೆಳವಣಿಗೆ ಕಂಡಿವೆ.

ಸರಕು ಮತ್ತು ಸೇವೆಗಳ ಆಮದು 2021–22ರಲ್ಲಿ ₹55.43 ಲಕ್ಷ ಕೋಟಿ ಇದ್ದಿದ್ದು ₹2022–23ರಲ್ಲಿ ₹63.14 ಲಕ್ಷ ಕೋಟಿಗೆ (ಶೇ 14) ಏರಿಕೆ ಆಗಿದೆ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.

ಸರಕು ಮತ್ತು ಸೇವೆಗಳ ಆಮದು ವಹಿವಾಟು 2022–23ರಲ್ಲಿ ₹73.14 ಲಕ್ಷ ಕೋಟಿಗೆ ತಲುಪಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.