ನವದೆಹಲಿ: ಭಾರತದ ಕಚ್ಚಾ ತೈಲ ಆಮದು ಫೆಬ್ರುವರಿಯಲ್ಲಿ 48.6 ಲಕ್ಷ ಬ್ಯಾರಲ್ಗಳಷ್ಟು ಆಗಿದೆ. ಇದು, 2020ರ ಡಿಸೆಂಬರ್ ನಂತರ ದೇಶ ಆಮದು ಮಾಡಿಕೊಂಡಿರುವ ಅತ್ಯಂತ ಗರಿಷ್ಠ ಪ್ರಮಾಣದ ಕಚ್ಚಾ ತೈಲ.

ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ತೈಲ ಕಂಪನಿಗಳು ಸಂಸ್ಕರಣಾ ಪ್ರಕ್ರಿಯೆಗೆ ವೇಗ ನೀಡಿವೆ. ಹೀಗಾಗಿ ಆಮದು ಸಹ ಹೆಚ್ಚಾಗುತ್ತಿದೆ.

ಆಮದು ಪ್ರಮಾಣವು ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ಶೇಕಡ 5ರಷ್ಟು ಹೆಚ್ಚಾಗಿದೆ. 2021ರ ಫೆಬ್ರುವರಿಗೆ ಹೋಲಿಸಿದರೆ ಶೇ 24ರಷ್ಟು ಏರಿಕೆ ಕಂಡಿದೆ.

ಭಾರತದ ಕಂಪನಿಗಳು ಸಾಮಾನ್ಯವಾಗಿ ಸಂಸ್ಕರಣೆ ಮಾಡುವುದಕ್ಕೂ ಎರಡು ತಿಂಗಳು ಮೊದಲು ಕಚ್ಚಾ ತೈಲ ಖರೀದಿಸುತ್ತವೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಾಗಿದ್ದರೂ ಅದನ್ನು ಗ್ರಾಹಕರ ಮೇಲೆ ವರ್ಗಾಯಿಸದೇ ಇರುವುದರಿಂದ ಮಾರಾಟದಿಂದ ನಷ್ಟ ಅನುಭವಿಸುತ್ತಿವೆ. ಹೀಗಾಗಿ ಕಂಪನಿಗಳು ಹೆಚ್ಚಿನ ಮಾರ್ಜಿನ್ ಗಳಿಸುವ ಸಲುವಾಗಿ ಸಂಸ್ಕರಣಾ ಪ್ರಕ್ರಿಯೆಗೆ ವೇಗ ನೀಡಿವೆ.

ಕೋವಿಡ್ ನಿರ್ಬಂಧಗಳನ್ನು ಸರ್ಕಾರ ತೆಗೆದುಹಾಕಿದ ಬಳಿಕ ದೇಶದಲ್ಲಿ ಇಂಧನ ಮಾರಾಟದಲ್ಲಿ ಹೆಚ್ಚಳ ಆಗುತ್ತಲೇ ಇದೆ.

ಓದಿ...

ಹಿಂದೂಗಳ ಪರವಾದ ಪ್ರತೀ ನಿರ್ಧಾರಕ್ಕೂ ಕಾಂಗ್ರೆಸ್ ವಿರೋಧಿಸುತ್ತಿದೆ: ಬಿಜೆಪಿ ಆರೋಪ

ರಾಜ್ಯದಾದ್ಯಂತ ಶಾಲಾ ತರಗತಿಗಳಲ್ಲಿ ‘ಭಗವದ್ಗೀತೆ’ ಬೋಧಿಸಲು ಚಿಂತನೆ: ಸಚಿವ ನಾಗೇಶ್

ರಷ್ಯಾ ರಾಕೆಟ್ ದಾಳಿ: ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.