ಬೆಂಗಳೂರು: ಮೈಂಡ್‌ಟ್ರಿ ಲಿಮಿಟೆಡ್ ಜೊತೆಗೆ ತನ್ನ ಕಾರ್ಯಾಚರಣೆಗಳನ್ನು ವಿಲೀನಗೊಳಿಸುವುದಾಗಿ ಐ.ಟಿ. ಸೇವಾ ಕಂಪನಿ ಎಲ್ ಆ್ಯಂಡ್ ಟಿ ಇನ್ಫೊಟೆಕ್ (ಎಲ್‌ಟಿಐ) ಶುಕ್ರವಾರ ತಿಳಿಸಿದೆ.

ಈ ವಿಲೀನದ ಮೂಲಕ ಐ.ಟಿ. ಸೇವೆಗಳನ್ನು ನೀಡುವ ದೊಡ್ಡ ಕಂಪನಿ ಸೃಷ್ಟಿಯಾಗಲಿದೆ. ವಿಲೀನದ ಬಳಿಕ ಒಟ್ಟಾರೆ ವರಮಾನವು ₹ 26,600 ಕೋಟಿ ದಾಟಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಲೀನ ಒಪ್ಪಂದಕ್ಕೆ ಷೇರುದಾರರು ಮತ್ತು ಷೇರುಪೇಟೆಯ ನಿಯಂತ್ರಣ ಮಂಡಳಿಯ ಒಪ್ಪಿಗೆ ದೊರೆಯಬೇಕಿದೆ.

ವಿಲೀನದ ಬಳಿಕ ರಚನೆ ಆಗಲಿರುವ ಕಂಪನಿಗೆ ‘ಎಲ್‌ಟಿಐಮೈಂಡ್‌ಟ್ರೀ’ ಎಂಬ ಹೆಸರು ಇಡಲಾಗುವುದು. ಒಪ್ಪಂದದ ಪ್ರಕಾರ, ಮೈಂಡ್‌ಟ್ರೀ ಕಂಪನಿಯ ಪ್ರತಿ 100 ಷೇರಿಗೆ ಎಲ್ ಆ್ಯಂಡ್ ಟಿ 73 ಷೇರುಗಳನ್ನು ನೀಡಲಿದೆ.

ಎಲ್ ಆ್ಯಂಡ್ ಟಿ (ಲಾರ್ಸನ್ ಆ್ಯಂಡ್ ಟೂಬ್ರೊ) ಕಂಪನಿಯು 2019ರಲ್ಲಿ ಮೈಂಡ್‌ಟ್ರಿ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ. ಎಲ್ ಆ್ಯಂಡ್ ಟಿ ಕಂಪನಿಯು ಮೈಂಡ್‌ಟ್ರೀನಲ್ಲಿ ಶೇ 60ರಷ್ಟು ಮತ್ತು ಎಲ್ ಅ್ಯಂಡ್ ಟಿ ಇನ್ಫೊಟೆಕ್‌ನಲ್ಲಿ ಶೇ 74ರಷ್ಟು ಷೇರುಪಾಲು ಹೊಂದಿದೆ.

ವಿಲೀನದ ನಂತರದ ಕಂಪನಿಯಲ್ಲಿ ಎಲ್ ಆ್ಯಂಡ್ ಟಿ ಶೇ 68.73ರಷ್ಟು ಷೇರುಪಾಲು ಹೊಂದಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.