ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಯು ಜುಲೈ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆ ತಿಳಿಸಿದೆ.

ಗುರುವಾರ ಬಿಡುಗಡೆಯಾಗಿರುವ ಎಚ್ಎಸ್ಬಿಸಿ ಇಂಡಿಯಾದ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕದ (ಪಿಎಂಐ) ವರದಿ ಪ್ರಕಾರ, ಜೂನ್ನಲ್ಲಿ 58.3ರಷ್ಟಿದ್ದ ಸೂಚ್ಯಂಕವು, ಜುಲೈನಲ್ಲಿ 58.1ಕ್ಕೆ ಇಳಿದಿದೆ. ಹೊಸ ಆರ್ಡರ್ ಮತ್ತು ಉತ್ಪಾದನೆ ಪ್ರಮಾಣದಲ್ಲಿನ ಅಲ್ಪ ಏರಿಕೆಯಿಂದಾಗಿ ಸೂಚ್ಯಂಕವು ಇಳಿಕೆ ಕಂಡಿದೆ ಎಂದು ತಿಳಿಸಿದೆ.

ಆದರೆ, ತಯಾರಿಕಾ ಸರಕುಗಳ ಮಾರಾಟದ ಬೆಲೆಯು 11 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಾರ್ಮಿಕ ಮತ್ತು ಉತ್ಪಾದನಾ ವೆಚ್ಚದ ಏರಿಕೆಯೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದೆ.

ಅಲ್ಪ ಪ್ರಮಾಣದಲ್ಲಿ ಇಳಿಕೆ ಹೊರತಾಗಿಯೂ ಹೊಸ ಆರ್ಡರ್ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಏಷ್ಯಾ, ಯುರೋಪ್, ದಕ್ಷಿಣ ಅಮೆರಿಕ, ಮಧ್ಯಪ್ರಾಚ್ಯದಿಂದ ಬೇಡಿಕೆ ಹೆಚ್ಚಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಪ್ರಮಾಣದಲ್ಲೂ ಏರಿಕೆಯಾಗಿದೆ ಎಂದು ವಿವರಿಸಿದೆ.

ಪಿಎಂಐ ಸೂಚ್ಯಂಕವು 50ಕ್ಕಿಂತ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ನಕಾರಾತ್ಮಕ ಎಂದು ಅರ್ಥೈಸಲಾಗುತ್ತದೆ.

‘ಜುಲೈನಲ್ಲಿ ತಯಾರಿಕಾ ಚಟುವಟಿಕೆ ಇಳಿಕೆಯಾದರೂ ಹಲವು ವಲಯಗಳ ಚಟುವಟಿಕೆ ಸದೃಢವಾಗಿದೆ’ ಎಂದು ಎಚ್ಎಸ್ಬಿಸಿಯ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.