ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆಯು ಮಾರ್ಚ್‌ನಲ್ಲಿ ಹದಿಮೂರುವರೆ ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಈ ತಿಂಗಳಿನಲ್ಲಿ ಸೇವೆಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ, ಮಾರಾಟ ಹಾಗೂ ವ್ಯಾಪಾರಕ್ಕೆ ಉತ್ತೇಜನ ಸಿಕ್ಕಿರುವುದೇ ಈ ಏರಿಕೆಗೆ ಕಾರಣ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಇಂಡಿಯಾ ಸಂಸ್ಥೆಯ ವರದಿ ತಿಳಿಸಿದೆ.

ಸೇವಾ ವಲಯದ ಚಟುವಟಿಕೆಯನ್ನು ಸೂಚಿಸುವ ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸ್ ಬ್ಯುಸಿನೆಸ್ ಸೂಚ್ಯಂಕವು ಫೆಬ್ರುವರಿಯಲ್ಲಿ 60.6 ಇತ್ತು. ಮಾರ್ಚ್‌ನಲ್ಲಿ 61.2ಕ್ಕೆ ಏರಿಕೆಯಾಗಿದೆ. 2010ರ ಜೂನ್ ತಿಂಗಳ ನಂತರದ ವೇಗದ ಬೆಳವಣಿಗೆ ಇದಾಗಿದೆ ಎಂದು ಹೇಳಿದೆ.

ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) 50ರ ಮೇಲಿದ್ದರೆ ಬೆಳವಣಿಗೆಯು ಸದೃಢವಾಗಿದೆ ಎಂದರ್ಥ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿರುವ ಸೂಚಕವಾಗಿದೆ. 400ಕ್ಕೂ ಹೆಚ್ಚು ಸೇವಾ ಕಂಪನಿಗಳ ಮಾಹಿತಿ ಆಧರಿಸಿ ಎಸ್ ಆ್ಯಂಡ್ ಪಿ ಈ ವರದಿ ಸಿದ್ಧಪಡಿಸಿದೆ.

ಫೆಬ್ರುವರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದ್ದ ಸೂಚ್ಯಂಕವು ಮಾರ್ಚ್‌ನಲ್ಲಿ ಏರಿಕೆಯಾಗಿದೆ. ಈ ತಿಂಗಳಿನಲ್ಲಿ ಸೇವಾ ವಲಯದ ಕಂಪನಿಗಳಲ್ಲಿ ಉದ್ಯೋಗ ನೇಮಕಾತಿಯೂ ಹೆಚ್ಚಿದೆ. ಇದು ಹೊಸ ಆರ್ಡರ್‌ಗಳ ಸಾಮರ್ಥ್ಯ ವಿಸ್ತರಿಸಲು ನೆರವಾಗಿದೆ ಎಂದು ಎಚ್‌ಎಸ್‌ಬಿಸಿ ಅರ್ಥಶಾಸ್ತ್ರಜ್ಞ ಇನೆಸ್ ಲ್ಯಾಮ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.