ನವದೆಹಲಿ: 2024ರ ಜನವರಿಯಲ್ಲಿ ದೇಶದ ಉಕ್ಕು ರಫ್ತು 18 ತಿಂಗಳ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ ಎಂದು ಸ್ಟೀಲ್ಮಿಂಟ್ ತಿಳಿಸಿದೆ.

ಯುರೋಪಿಯನ್ ಒಕ್ಕೂಟದಿಂದ ಹೆಚ್ಚಿದ ಬೇಡಿಕೆ, ದೇಶದ ಉಕ್ಕಿನ ಸ್ಪರ್ಧಾತ್ಮಕ ಬೆಲೆಗಳು ರಫ್ತು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಸಂಶೋಧನಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

2023ರ ಜನವರಿಯಲ್ಲಿ 6.7 ಲಕ್ಷ ಟನ್ (0.67 ದಶಲಕ್ಷ ಟನ್) ರಫ್ತಾಗಿದ್ದರೆ, ಅದು ಈ ಬಾರಿ 11.10 ಲಕ್ಷ ಟನ್ಗೆ (1.11 ದಶಲಕ್ಷ ಟನ್) ಏರಿಕೆಯಾಗಿದೆ ಎಂದು ತಿಳಿಸಿದೆ.

ದೇಶದ ಮಾರುಕಟ್ಟೆಯಲ್ಲಿ ಪ್ರತಿ ಟನ್ ಹಾಟ್ ರೋಲ್ಡ್ ಕಾಯಿಲ್ (ಎಚ್ಆರ್ಸಿ) ಬೆಲೆ ₹54,300 ಇದ್ದರೆ, ಜಾಗತಿಕ ದರವು ₹58 ಸಾವಿರ ಇದೆ. ಈ ಅಂಶವು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉಕ್ಕಿನ ಬೇಡಿಕೆಯನ್ನು ಹೆಚ್ಚಾಗುವಂತೆ ಮಾಡಿತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.