ನವದೆಹಲಿ: 2023-24ನೇ ಆರ್ಥಿಕ ವರ್ಷದಲ್ಲಿ ₹14.84 ಲಕ್ಷ ಕೋಟಿ ಪರೋಕ್ಷ ತೆರಿಗೆ ಸಂಗ್ರಹಕ್ಕೆ ಪರಿಷ್ಕೃತ ಗುರಿ ನಿಗದಿಯಾಗಿತ್ತು. ಇದಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ತಿಳಿಸಿದೆ.

ಸೀಮಾ ಹಾಗೂ ಅಬಕಾರಿ ಸುಂಕ ಒಳಗೊಂಡ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಸಿಬಿಐಸಿ ಅಧ್ಯಕ್ಷ ಸಂಜಯ್ ಕುಮಾರ್ ಅಗರ್ವಾಲ್ ಅವರು, ಕ್ಷೇತ್ರ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

‘ಈ ಗುರಿ ಸಾಧನೆಯು ವೃತ್ತಿಪರತೆಯನ್ನಷ್ಟೇ ಪ್ರತಿಬಿಂಬಿಸುವುದಿಲ್ಲ. ಮಂಡಳಿಯ ಸಾಂಘಿಕ ಕೆಲಸಕ್ಕೆ ಕನ್ನಡಿ ಹಿಡಿದಿದೆ. ನಿಮ್ಮ ಈ ಅಮೂಲ್ಯ ಕೊಡುಗೆಗೆ ಆಭಾರಿಯಾಗಿದ್ದೇನೆ’ ಎಂದು ತಿಳಿಸಿದ್ದಾರೆ.

₹20.18 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: 2023–24ನೇ ಆರ್ಥಿಕ ವರ್ಷದಲ್ಲಿ ₹20.18 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಹೊಸ ಮೈಲಿಗಲ್ಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 11.7ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಪರಿಷ್ಕೃತ ಕೇಂದ್ರ ಜಿಎಸ್‌ಟಿಯಲ್ಲಿ ಪರಿಹಾರ ಸೆಸ್ ₹9.57 ಲಕ್ಷ ಕೋಟಿ, ಅಬಕಾರಿ ತೆರಿಗೆ ₹3.08 ಲಕ್ಷ ಕೋಟಿ ಹಾಗೂ ಕಸ್ಟಮ್ಸ್ ಸುಂಕ ₹2.19 ಲಕ್ಷ ಕೋಟಿ ಇದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.