ಬೆಂಗಳೂರು: ಕೈಗಾರಿಕಾ ಇಲಾಖೆಯಲ್ಲಿ ದೀರ್ಘ ಅವಧಿಯಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಮತ್ತೆ ‘ಕೈಗಾರಿಕಾ ಅದಾಲತ್’ ಆರಂಭಿಸಲು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಮುಂದಾಗಿದ್ದಾರೆ. ಜೊತೆಗೆ, ‘ಉದ್ಯಮಿಯಾಗು- ಉದ್ಯೋಗ ನೀಡು’ ಯೋಜನೆಗೂ ಚಾಲನೆ ಸಿಗಲಿದೆ.

ಇದೇ ತಿಂಗಳ 27ರಂದು ಬೆಂಗಳೂರಿನಲ್ಲಿ ಕೈಗಾರಿಕಾ ಅದಾಲತ್, ಮರುದಿನ ‘ಉದ್ಯಮಿಯಾಗು, ಉದ್ಯೋಗ ನೀಡು’ ಕಾರ್ಯಕ್ರಮ ನಡೆಯಲಿದೆ.

2008– 2013 ರಲ್ಲಿ ಕೈಗಾರಿಕಾ ಸಚಿವರಾಗಿದ್ದ ವೇಳೆ ಮೊದಲ ಬಾರಿಗೆ ಕೈಗಾರಿಕಾ ಅದಾಲತ್ ಎಂಬ ಪರಿಕಲ್ಪನೆಯನ್ನು ನಿರಾಣಿ ಜಾರಿಗೆ ತಂದಿದ್ದರು. ಗಣಿ ಮತ್ತು ಕಲ್ಲಿದ್ದಲು ಸಚಿವರಾಗಿದ್ದ ವೇಳೆಯೂ ಒಂದೇ ಸೂರಿನಡಿ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಜಿಲ್ಲಾ ಮಟ್ಟದಲ್ಲಿ ‘ಗಣಿ ಅದಾಲತ್’ ನಡೆಸಲು ಅವರು ಮುಂದಾಗಿದ್ದರು.

ರಾಜ್ಯದಾದ್ಯಂತ ಹಲವು ಕೈಗಾರಿಕಾ ವ್ಯಾಜ್ಯಗಳು ಅನೇಕ ವರ್ಷಗಳಿಂದ ಬಗೆಹರಿಯದೆ ಉಳಿದಿವೆ. ಅವುಗಳನ್ನು ದಾವೆದಾರರ ಸಮಕ್ಷಮದಲ್ಲಿ ಸುಲಭ
ವಾಗಿ ಬಗೆಹರಿಸಿಕೊಳ್ಳಬಹುದು. ಶೇ 75
ರಷ್ಟು ಸಮಸ್ಯೆಗಳನ್ನು ಸ್ಥಳೀಯವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಇದ
ರಿಂದ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂಬ ನಿರೀಕ್ಷೆ ನಿರಾಣಿ ಅವರದ್ದು.

ಬಿಡದಿ, ಹಾರೋಹಳ್ಳಿ, ಜಿಗಣಿ, ದಾಬಸ್ ಪೇಟೆ, ತುಮಕೂರಿನ ವಸಂತ ನರಸಾಪುರದಲ್ಲಿರುವ ಆಹಾರ ಸಂಸ್ಕರಣಾ ಘಟಕ ಸೇರಿದಂತೆ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಬಾಕಿ ಇರುವ ಪ್ರಕರಣಗಳ ಬಗ್ಗೆ ದೂರು
ಗಳು ಕೇಳಿಬಂದಿದ್ದವು. ಹೀಗಾಗಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಕರ್ನಾ
ಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿದೇರ್ಶಕ ರೇವಣ್ಣ ಗೌಡ ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಸಮಾ
ಲೋಚನೆ ನಡೆಸಿದ ನಿರಾಣಿ, ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಾರ್ಯೋನ್ಮುಖರಾಗುವಂತೆ ಸೂಚಿಸಿದ್ದರು.

ಯುವಕರು ಉದ್ಯಮಿಗಳಾಗುವಂತೆ
ಪ್ರೋತ್ಸಾಹಿಸಲು ಬೆಂಗಳೂರು, ಮೈಸೂರು, ಮಂಗಳೂರು,
ಬೆಳಗಾವಿ ಮತ್ತು ಕಲಬುರ್ಗಿ ನಗರಗಳಲ್ಲಿ ‘ಕೈಗಾರಿಕಾ ಅದಾಲತ್’ ನಡೆದ ಮರುದಿನ ಕಾರ್ಯಾಗಾರ ಹಮ್ಮಿಕೊಳ್ಳಲು ನಿರಾಣಿ ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.