ಬೆಂಗಳೂರು: ಸರ್ವರಿಗೂ ಉತ್ತಮ ಆರೋಗ್ಯ ಸಿಗಬೇಕೆಂಬ ಧ್ಯೇಯದೊಂದಿಗೆ ಇನ್ವಿಗಾ ಹೆಲ್ತ್ಕೇರ್ ಖಾಸಗಿ ಈಕ್ವಿಟಿ ಫಂಡ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ ಎಂದು ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್‌ನ (ಎಚ್‌ಸಿಜಿ) ಸ್ಥಾಪಕ ಮತ್ತು ಕಾರ್ಯ ನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜಯ್ ಕುಮಾರ್ ಹೇಳಿದ್ದಾರೆ.

‘ದೇಶದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಈ ನಿಟ್ಟಿನಲ್ಲಿ ಇನ್ವಿಗಾ ಹೆಲ್ತ್ ಫಂಡ್ ಸ್ಥಾಪಿಸಲಾಗಿದ್ದು, ಇದು ಸಮಾಜದ ಎಲ್ಲಾ ವರ್ಗಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ ಒದಗಿಸಲಿದೆ. ಹೂಡಿಕೆ ಮೂಲಕ ದೇಶದ ಆರೋಗ್ಯ ವಲಯವು ಕ್ಲಿನಿಕಲ್ ಉತ್ಕೃಷ್ಟತೆಯನ್ನು ಬೆಳೆಸುತ್ತದೆ’ ಎಂದು ಹೇಳಿದ್ದಾರೆ.

ಸಮಾಜದ ಎಲ್ಲಾ ವರ್ಗಗಳಿಗೆ ಅನುಕೂಲವಾಗುವಂತೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವುದೇ ನಮ್ಮ ಗುರಿ. ಇದು ಭಾರತೀಯ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡಲಿದೆ. ಆರಂಭದಲ್ಲಿ ₹166 ಕೋಟಿ ನಿಧಿಯನ್ನು ಕ್ರೋಡೀಕರಣ ಮಾಡಲಾಗಿದೆ ಎಂದು ಇನ್ವಿಗಾ ಹೆಲ್ತ್ಕೇರ್ ಫಂಡ್ನ ಸಹ-ಸಂಸ್ಥಾಪಕ ಅಜಯ್ ಗರ್ಗ್ ತಿಳಿಸಿದ್ದಾರೆ.

ಇನ್ವಿಗಾ ಹೆಲ್ತ್ಕೇರ್ ಫಂಡ್ ತನ್ನ ಮೊದಲ ಹೂಡಿಕೆಯಲ್ಲಿ ಆಯಾ ಋತುವಿನಲ್ಲಿ ಕಾಣಿಸಿಕೊಳ್ಳುವ ಜ್ವರ (ಇನ್ಫ್ಲ್ಯುಂಜಾ), ಉಸಿರಾಟದ ಮೇಲೆ ದಾಳಿ ಮಾಡುವ ವೈರಾಣು ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿರುವ ಬಯೊಟೆಕ್ ಸ್ಟಾರ್ಟ್ ಅಪ್ ಮೈನ್ವಾಕ್ಸ್‌ಗೆ ಹಣಕಾಸಿನ ಬೆಂಬಲ ನೀಡಲಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನ ಮಾಲಿಕ್ಯುಲರ್ ಬಯೊಫಿಸಿಕ್ಸ್ ಘಟಕದ ಪ್ರೊ.ರಾಘವನ್ ವರದರಾಜನ್ ಮತ್ತು ಡಾ.ಗೌತಮ್ ನಾಡಿಗ್ ಅವರು ಮೈನ್ವಾಕ್ಸ್ ಅನ್ನು ಸ್ಥಾಪಿಸಿದ್ದಾರೆ. ಕಂಪನಿಯು ಬೆಂಗಳೂರಿನ ಐಐಎಸ್ಸಿಯ ಎಫ್ಎಸ್ಐಡಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.