ಬೆಂಗಳೂರು: ದೇಶದ ನಾಲ್ಕು ಮುಂಚೂಣಿ ಐ.ಟಿ ಕಂಪನಿಗಳಾದ ಟಿಸಿಎಸ್, ವಿಪ್ರೊ, ಇನ್ಫೊಸಿಸ್ ಮತ್ತು ಎಚ್ಸಿಎಲ್ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಸಾವಿರಾರು ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ.

ಕಳೆದ ವರ್ಷ ಉದ್ಯೋಗ ಕಡಿತಕ್ಕೆ ಹೆಚ್ಚು ಆದ್ಯತೆ ನೀಡಿದ್ದ ಕಂಪನಿಗಳು ಈ ಸಾಲಿನಲ್ಲಿ ಹೊಸ ನೇಮಕಾತಿಗೆ ಮುಂದಾಗಿವೆ.

2018–19ನೇ ಸಾಲಿನ ಮೊದಲ ತ್ರೈಮಾಸಿಕ (ಏಪ್ರಿಲ್ನಿಂದ ಜೂನ್ ಅವಧಿಯಲ್ಲಿ) ನಾಲ್ಕು ಕಂಪನಿಗಳು ಒಟ್ಟಾರೆ 16,547 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ 5,877 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ 1,400 ಉದ್ಯೋಗಿಗಳನ್ನು ಕೈಬಿಟ್ಟಿತ್ತು.

ಇನ್ಫೊಸಿಸ್ 17,709 ಉದ್ಯೋಗಗಳನ್ನು ಸೃಷ್ಟಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 8,645 ಉದ್ಯೋಗ ನೀಡಿತ್ತು.

ಹೊಸ ನೇಮಕಾತಿಯಲ್ಲಿ ಎಚ್ಸಿಎಲ್ ಟೆಕ್ನಾಲಜಿಸ್ ವಿಪ್ರೊ ಕಂಪನಿಯನ್ನು ಹಿಂದಿಕ್ಕಿದೆ.

ಎರಡರಿಂದ ನಾಲ್ಕು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಅವಕಾಶ ದೊರೆಯುತ್ತಿವೆ’ ಎಂದು ಇನ್ಫೊಸಿಸ್ ವಕ್ತಾರರು ತಿಳಿಸಿದ್ದಾರೆ.

ಶಿಕ್ಷಣ ಮುಗಿದ ತಕ್ಷಣ ಉದ್ಯೋಗಕ್ಕೆ ಸೇರುವುದಕ್ಕಿಂತ ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.