ಬೆಂಗಳೂರು: ಜಾವಾ ಯೆಜ್ಡಿ ಮೋಟರ್‌ಸೈಕಲ್ಸ್ ಕಂಪನಿಯು ಪ್ರೀಮಿಯಂ ಆವೃತ್ತಿಯ ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಎಕ್ಸ್ ಷೋರೂಂ ಬೆಲೆಯು ಕ್ರಮವಾಗಿ ₹1.98 ಲಕ್ಷ ಮತ್ತು ₹2.08 ಲಕ್ಷದಿಂದ ಆರಂಭ ಆಗುತ್ತದೆ ಎಂದು ಕಂಪನಿ ಹೇಳಿದೆ.

ಜಾವಾ 42 ಬೈಕ್ 294.7ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಮತ್ತು ಯೆಜ್ಡಿ ರೋಡ್‌ಸ್ಟರ್ 334ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ತಯಾರಿಕೆ ಇಳಿಕೆ

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಇಂಡಿಯಾದ ವಾಹನಗಳ ತಯಾರಿಕೆಯು 2022ರ ಸೆಪ್ಟೆಂಬರ್‌ಗೆ ಹೋಲಿಸಿದರೆ 2023 ಸೆಪ್ಟೆಂಬರ್‌ನಲ್ಲಿ ಶೇ 1ರಷ್ಟು ಇಳಿಕೆ ಕಂಡಿದೆ.

2022ರ ಸೆಪ್ಟೆಂಬರ್‌ನಲ್ಲಿ 1.77 ಲಕ್ಷ ವಾಹನಗಳನ್ನು ಕಂಪನಿ ತಯಾರಿಸಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ 1.74 ಲಕ್ಷಕ್ಕೆ ಇಳಿಕೆ ಕಂಡಿದೆ. ಪ್ರಯಾಣಿಕ ಕಾರುಗಳ ತಯಾರಿಕೆಯು ಶೇ 21ರಷ್ಟು ಇಳಿಕೆ ಆಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಸನ್‌ಫೀಸ್ಟ್ ಮಾರಿ ಲೈಟ್‌ಗೆ ಜ್ಯೋತಿಕಾ ರಾಯಭಾರಿ

ಬೆಂಗಳೂರು: ನಟಿ ಜ್ಯೋತಿಕಾ ಅವರನ್ನು ಐಟಿಸಿಯ ಸನ್‌ಫೀಸ್ಟ್ ಮಾರಿ ಲೈಟ್‌ನ ಬ್ರ್ಯಾಂಡ್ ರಾಯಭಾರಿ ಆಗಿ ನೇಮಿಸಲಾಗಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸನ್‌ಫೀಸ್ಟ್ ಮಾರಿ ಲೈಟ್ ಉತ್ಪನ್ನವನ್ನು ಮರು ಬಿಡುಗಡೆ ಮಾಡಿರುವ ಬೆನ್ನಲ್ಲೇ ಜ್ಯೋತಿಕಾ ಅವರನ್ನು ಬ್ರ್ಯಾಂಡ್ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ಎಲ್‌ಐಸಿಗೆ ಐ.ಟಿ. ನೋಟಿಸ್

ನವದೆಹಲಿ: ಆದಾಯ ತೆರಿಗೆ ಇಲಾಖೆಯು ₹84 ಕೋಟಿ ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದು, ಮೇಲ್ಮನವಿ ಸಲ್ಲಿಸುವುದಾಗಿ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತಿಳಿಸಿದೆ.

ಆದಾಯ ತೆರಿಗೆ ಕಾಯ್ದೆ 1061ರ ಸೆಕ್ಷನ್ 271(1) (ಸಿ) ಮತ್ತು 270ಎ ಉಲ್ಲಂಘಿಸಿರುವುದಕ್ಕೆ ಈ ದಂಡ ವಿಧಿಸಲಾಗಿದೆ. 2012–13ನೇ ಅಂದಾಜು ವರ್ಷಕ್ಕೆ ₹12.61 ಕೋಟಿ, 2018–19ಕ್ಕೆ ₹33.82 ಕೋಟಿ ಮತ್ತು 2019–20ನೇ ಅಂದಾಜು ವರ್ಷಕ್ಕೆ ₹37.58 ಕೋಟಿ ದಂಡ ವಿಧಿಸಲಾಗಿದೆ ಎಂದು ಎಲ್‌ಐಸಿಯು ಷೇರುಪೇಟೆಗೆ ತಿಳಿಸಿದೆ.

ಎಲ್ಲ ಮಾದರಿಗಳಲ್ಲೂ 6 ಏರ್‌ಬ್ಯಾಗ್: ಹುಂಡೈ

ನವದೆಹಲಿ: ಹುಂಡೈ ಮೋಟರ್ ಇಂಡಿಯಾದ ಎಲ್ಲ ಕಾರುಗಳೂ 6 ಏರ್‌ಬ್ಯಾಗ್ ಹೊಂದಿರಲಿವೆ ಎಂದು ಕಂಪನಿಯು ಮಂಗಳವಾರ ತಿಳಿಸಿದೆ.

ಭಾರತದಲ್ಲಿ ಕಾರುಗಳ ಸುರಕ್ಷತಾ ಸೌಲಭ್ಯಗಳನ್ನು ಅಳೆಯುವ ಈಚೆಗಷ್ಟೇ ಪರಿಚಯಿಸಲಾಗಿರುವ ‘ಭಾರತ್ ಎನ್‌ಸಿಎಪಿ’ಯಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಲು ನಿರ್ಧಾರ ಮಾಡಿರುವುದಾಗಿಯೂ ಕಂಪನಿ ತಿಳಿಸಿದೆ. ಆರಂಭದಲ್ಲಿ ಮೂರು ಮಾದರಿಗಳನ್ನು ಭಾರತ್ ಎನ್‌ಸಿಎಪಿ ಅಡಿ ಪರೀಕ್ಷೆಗೆ ಒಳಪಡಲಿವೆ. ನಂತರದಲ್ಲಿ ಎಲ್ಲ ಮಾದರಿಗಳೂ ಸೇರಿಕೊಳ್ಳಲಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.