ಜಿಯೊ ಫೈಬರ್ ಹೊಸ ಪ್ರೀಪೇಯ್ಡ್ ವೋಚರ್ಪರಿಚಯಿಸಿದೆ.ವಾರಕ್ಕೆ ₹199 ರೀಚಾರ್ಜ್ ಮಾಡಿಸಿದರೆ ಅನಿಯಮಿತ ವಾಯ್ಸ್ ಕಾಲ್ ಹಾಗೂ ನಿಗದಿತ ಹೈಸ್ಪೀಡ್ ಡಾಟಾ ಪಡೆಯಬಹುದು.

ಈ ಹಿಂದೆ ನಿಗದಿಯಾಗಿರುವಂತೆ ಜಿಯೊ ಫೈಬರ್ ಪ್ರೀಪೇಯ್ಡ್ ಯೋಜನೆಗಳು ₹699 ರಿಂದ ₹8,499ರ ವರೆಗೂ ಇದೆ. ಆಯ್ಕೆ ಮಾಡಿಕೊಂಡ ಯೋಜನೆಯಲ್ಲಿ ಹೈಸ್ಪೀಡ್ ಡಾಟಾ ಡೌನ್ಲೋಡ್ ಮಿತಿ ಪೂರ್ಣಗೊಂಡರೆ, ಹೊಸ ಪ್ರೀಪೇಯ್ಡ್ ವೋಚರ್ ರೀಚಾರ್ಜ್ ಮೂಲಕ ಡಾಟಾ ಮಿತಿ ಹೆಚ್ಚಿಸಿಕೊಳ್ಳಬಹುದಾಗಿದೆ.

₹199 ಟಾಪ್ ಅಪ್ ರೀಚಾರ್ಜ್ ಮಾಡಿಕೊಂಡರೆ ಒಂದು ವಾರ 100 ಎಂಬಿಪಿಎಸ್ ವೇಗದಲ್ಲಿ ಅನಿಯಮಿತ ಡಾಟಾ,ಅನಿಯಮಿತ ವಾಯ್ಸ್ ಕಾಲ್ ಹಾಗೂ ಹಾಗೂ ಟಿವಿ ವಿಡಿಯೊ ಕಾಲಿಂಗ್ ಸೇವೆ ಸಿಗುತ್ತದೆ.

ಜಿಯೊ ಫೈಬರ್ ಸಂಪರ್ಕ ಪಡೆಯುವ ಹೊಸ ಗ್ರಾಹಕರಿಗೆ ಸಿಗುತ್ತಿದ್ದ ಉಚಿತ ಬಳಕೆ ಸೇವೆಯ ಅವಕಾಶವನ್ನು ಕೈಬಿಡಲಾಗಿದ್ದು, ಮೊದಲ ತಿಂಗಳಿನಿಂದಲೇ ಪ್ರೀಪೇಯ್ಡ್ ಯೋಜನೆ ಆಯ್ಕೆ ಮಾಡಿಕೊಂಡು ಸೇವೆ ಪಡೆಯಬೇಕಿದೆ. ಜಿಯೊ ಫೈಬರ್ ಸಂಪರ್ಕ ಮತ್ತು ಅದಕ್ಕೆ ಅಗತ್ಯ ಸಾಧನ ಪಡೆಯಲು ₹2,500 ಮರಳಿ ಪಡೆಯಬಹುದಾದ ಠೇವಣಿ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.