ನವದೆಹಲಿ: ಕಚ್ಚಾ ತೈಲ ಮತ್ತು ರಿಫೈನರಿ ಉತ್ಪನ್ನಗಳ ಉತ್ಪಾದನೆಯ ಕುಸಿತದಿಂದಾಗಿ ದೇಶದ ಪ್ರಮುಖ 8 ಮೂಲ ಸೌಕರ್ಯ ವಲಯಗಳ ಬೆಳವಣಿಗೆಯು ಜೂನ್ ತಿಂಗಳಲ್ಲಿ 20 ತಿಂಗಳ ಕನಿಷ್ಠ ಮಟ್ಟವಾದ ಶೇ 4ಕ್ಕೆ ಇಳಿಕೆಯಾಗಿದೆ.

ಮೇ ತಿಂಗಳಲ್ಲಿ ಈ ವಲಯಗಳ ಉತ್ಪಾದನೆಯು ಶೇ 6.4ರಷ್ಟು ಏರಿಕೆ ಆಗಿತ್ತು. 2023ರ ಜೂನ್ನಲ್ಲಿ ಶೇ 8.4ರಷ್ಟು ಮತ್ತು 2022ರ ಅಕ್ಟೋಬರ್ನಲ್ಲಿ ಶೇ 0.7ರಷ್ಟು ದಾಖಲಾಗಿತ್ತು ಎಂದು ಕೇಂದ್ರ ಸರ್ಕಾರವು ಬುಧವಾರ ತಿಳಿಸಿದೆ.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನ, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಪ್ರಮುಖ ವಲಯಗಳಾಗಿವೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಈ ವಲಯಗಳು ಶೇ 40.27ರಷ್ಟು ಕೊಡುಗೆ ನೀಡುತ್ತವೆ.

ಪ್ರಸಕ್ತ ವರ್ಷದ ಏಪ್ರಿಲ್–ಜೂನ್ ಅವಧಿಯಲ್ಲಿ ಮೂಲ ಸೌಕರ್ಯ ವಲಯಗಳ ಉತ್ಪಾದನೆಯು ಶೇ 5.7ರಷ್ಟಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 6ರಷ್ಟು ಇತ್ತು.

ಕಚ್ಚಾ ತೈಲ ಉತ್ಪಾದನೆಯು (–) ಶೇ 2.6 ಮತ್ತು ರಿಫೈನರಿ ಉತ್ಪನ್ನಗಳ ಉತ್ಪಾದನೆಯು (–) ಶೇ 1.5ರಷ್ಟು ಕಡಿಮೆಯಾಗಿದೆ.

ನೈಸರ್ಗಿಕ ಅನಿಲ ಶೇ 3.3, ರಸಗೊಬ್ಬರ ಶೇ 2.4, ಉಕ್ಕು ಶೇ 2.7 ಮತ್ತು ಸಿಮೆಂಟ್ ವಲಯದ ಉತ್ಪಾದನೆಯು ಶೇ 1.9ರಷ್ಟು ಇಳಿಕೆಯಾಗಿದೆ. ಆದರೆ, ಕಲ್ಲಿದ್ದಲು ಶೇ 14.8ರಷ್ಟು ಮತ್ತು ವಿದ್ಯುತ್ ವಲಯದ ಬೆಳವಣಿಗೆಯು ಶೇ 7.7ರಷ್ಟು ಬೆಳವಣಿಗೆ ದಾಖಲಿಸಿದೆ.

‘ಮೇ ತಿಂಗಳಲ್ಲಿನ ಉತ್ಪಾದನೆಗೆ ಹೋಲಿಸಿದರೆ ಕಲ್ಲಿದ್ದಲು, ರಸಗೊಬ್ಬರ ಮತ್ತು ಸಿಮೆಂಟ್ ವಲಯ ಹೊರತುಪಡಿಸಿ ಉಳಿದ ಐದು ವಲಯಗಳ ಬೆಳವಣಿಗೆಯು ಕುಗ್ಗಿದೆ. ಹಾಗಾಗಿ, ಜೂನ್ನಲ್ಲಿ ಈ ವಲಯಗಳ ಬೆಳವಣಿಗೆ ಇಳಿಕೆಯಾಗಿದೆ. ಆದರೆ, ಕೈಗಾರಿಕಾ ಉತ್ಪಾದನೆಯು ಏರಿಕೆಯಾಗುವ ನಿರೀಕ್ಷೆಯಿದೆ’ ಎಂದು ಐಸಿಆರ್ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.