ನವದೆಹಲಿ: ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆಯಲ್ಲಿನ ಇಳಿಕೆಯಿಂದ ದೇಶದ ಪ್ರಮುಖ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆ ಆಗಸ್ಟ್‌ನಲ್ಲಿ ಶೇ 1.8ರಷ್ಟು ಇಳಿಕೆಯಾಗಿದೆ. ಇದು ಮೂರುವರೆ ವರ್ಷದ ಕನಿಷ್ಠ ಮಟ್ಟವಾಗಿದೆ ಎಂದು ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.

ಜುಲೈನಲ್ಲಿ ಬೆಳವಣಿಗೆ ದರ ಶೇ 6.1ರಷ್ಟು ದಾಖಲಾಗಿತ್ತು.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಈ ಎಂಟು ವಲಯಗಳಾಗಿವೆ. 2023ರ ಆಗಸ್ಟ್‌ನಲ್ಲಿ ಈ ವಲಯಗಳ ಬೆಳವಣಿಗೆ ಶೇ 13ರಷ್ಟು ದಾಖಲಾಗಿತ್ತು.

ಏಪ್ರಿಲ್–ಆಗಸ್ಟ್‌ನಲ್ಲಿ ಈ ವಲಯಗಳ ಉತ್ಪಾದನೆ ಶೇ 4.6ರಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 8ರಷ್ಟಿತ್ತು.

ಈ ವಲಯಗಳು ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 40ರಷ್ಟು ಕೊಡುಗೆ ನೀಡುತ್ತವೆ.

ಕಲ್ಲಿದ್ದಲು (ಶೇ 8.1), ಕಚ್ಚಾ ತೈಲ (ಶೇ 3.4), ನೈಸರ್ಗಿಕ ಅನಿಲ (ಶೇ 3.6), ರಿಫೈನರಿ ಉತ್ಪನ್ನಗಳು (ಶೇ 1), ಸಿಮೆಂಟ್ (ಶೇ 3) ಮತ್ತು ವಿದ್ಯುತ್ ಶೇ 5ರಷ್ಟು ಉತ್ಪಾದನೆ ಇಳಿಕೆಯಾಗಿದೆ. ರಸಗೊಬ್ಬರ ಮತ್ತು ಉಕ್ಕು ಕ್ರಮವಾಗಿ ಶೇ 3.2 ಮತ್ತು ಶೇ 4.5ರಷ್ಟು ಉತ್ಪಾದನೆ ದಾಖಲಿಸಿದೆ.

‘ಹೆಚ್ಚಿನ ಮಳೆಯು ಗಣಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಈ ವಲಯಗಳ ಉತ್ಪಾದನೆ ಪ್ರಮಾಣ ಕುಸಿದಿದೆ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.