ಬೆಂಗಳೂರು: ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ವಾರಾಂತ್ಯದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ‘ನಿಮ್ಮ ಮನೆ’ ಮೇಳವು ಮನೆ ಖರೀದಿಸುವವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಶುಕ್ರವಾರ ಸಂಜೆ ಉದ್ಘಾಟನೆಗೊಂಡಿದ್ದ ಮೇಳಕ್ಕೆ ಶನಿವಾರ ಮತ್ತು ಭಾನುವಾರ ಆಸಕ್ತ ಮನೆ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಮೇಳಕ್ಕೆ ಬಂದವರಲ್ಲಿ ಮಧ್ಯ ವಯಸ್ಸಿನ ಐ.ಟಿ. ವೃತ್ತಿನಿರತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎಂದು ಸಂಘಟಕರು ತಿಳಿಸಿದ್ದಾರೆ.

‘ಇಂತಹ ಮೇಳಗಳು ನಗರದಲ್ಲಿ ನಡೆಯುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಕೆಲ ಕಾರಣಗಳಿಗಾಗಿ ನಾವು ಎರಡು ಮೂರು ವರ್ಷಗಳಿಂದ ಈ ಬಗೆಯ ಮೇಳ ಏರ್ಪಡಿಸಿರಲಿಲ್ಲ. ಸಂಸ್ಥೆಯ ಚೆನ್ನೈ ಕೇಂದ್ರದಲ್ಲಿ ಮಾತ್ರ ನಿಯಮಿತವಾಗಿ ಸಂಘಟಿಸಲಾಗುತ್ತಿದೆ. ಬೆಂಗಳೂರಿನಲ್ಲಿಯೂ ಅಗತ್ಯ ಬಿದ್ದಾಗಲೆಲ್ಲ ಕಟ್ಟಡ ನಿರ್ಮಾಣ ಸಂಸ್ಥೆಗಳ ಸಹಯೋಗದಲ್ಲಿ ಸಣ್ಣ ಪ್ರಮಾಣದಲ್ಲಿ ಇಂತಹ ಮೇಳ ನಡೆಸಿಕೊಂಡು ಬರಲಾಗಿದೆ’ ಎಂದು ಎಲ್ಐಸಿ ಎಚ್ಎಫ್ಎಲ್ನ ಸಿಇಒ ವಿನಯ್ ಸಾಹ್ ಹೇಳಿದ್ದಾರೆ.

‘ಉತ್ತಮ ಸಂಖ್ಯೆಯಲ್ಲಿ ಬುಕಿಂಗ್ ನಡೆದಿದೆ. ಗೃಹ ಸಾಲ ಮಂಜೂರಾತಿಯು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಗೃಹ ನಿರ್ಮಾಣ ಹಣಕಾಸು ಸಂಸ್ಥೆ, ಮನೆ ಖರೀದಿದಾರರು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳ ಮಧ್ಯೆ ಸಂಬಂಧ ಕುದುರಲು ಇಂತಹ ಮೇಳಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಮೇಳಕ್ಕೆ ಭೇಟಿ ನೀಡಿದವರ ಮಕ್ಕಳಿಗಾಗಿ ಸಂಘಟಕರು ವ್ಯವಸ್ಥೆ ಮಾಡಿದ ಮನರಂಜನಾ ಸೌಲಭ್ಯಗಳೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.