ನವದೆಹಲಿ: ಬೆಂಗಳೂರಲ್ಲಿ ಎರಡು ವಸತಿ ಯೋಜನೆಗಳನ್ನು ನಿರ್ಮಿಸಲು ₹800 ಕೋಟಿ ಹೂಡಿಕೆ ಮಾಡಲಿರುವುದಾಗಿ ಮ್ಯಾಕ್ರೊಟೆಕ್ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅಭಿಷೇಕ್ ಲೋಧಾ ಹೇಳಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಕಂಪನಿ, ಬೆಂಗಳೂರಲ್ಲಿ ತನ್ನ ಮೊದಲ ವಸತಿ ಯೋಜನೆ ಅಭಿವೃದ್ಧಿ ಹಾಗೂ ಬೆಂಗಳೂರು ಮಾರುಕಟ್ಟೆಗೆ ಪ್ರವೇಶವನ್ನು ಘೋಷಿಸಿತ್ತು. ನಂತರ ಇನ್ನೊಂದು ವಸತಿ ಯೋಜನೆಯನ್ನು ಸೇರಿಸಿತ್ತು. ಅದರಂತೆ ಈ ತಿಂಗಳಲ್ಲಿ ತನ್ನ ಮೊದಲ ವಸತಿ ಯೋಜನೆಯನ್ನು ಆರಂಭಿಸಿದೆ.

ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಮ್ಮ ಎರಡನೇ ಯೋಜನೆಯನ್ನು ಆರಂಭ ಮಾಡಲು ಗುರಿ ಹಾಕಿಕೊಂಡಿದ್ದೇವೆ. ಇದು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಜಾರಿಗೊಳ್ಳಬಹುದು ಎಂದು ಲೋಧಾ ತಿಳಿಸಿದರು.

ಈ ಎರಡು ಯೋಜನೆಗಳ ನಿರ್ಮಾಣ ವೆಚ್ಚ ₹800 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಇವೆರಡರ ಒಟ್ಟು ಮೌಲ್ಯ ಸುಮಾರು ₹2,500 ಕೋಟಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಮ್ಯಾಕ್ರೊಟೆಕ್ ಡೆವಲಪರ್ಸ್ ಪ್ರತಿ ಅಪಾರ್ಟ್‌ಮೆಂಟ್ ಮಾರಾಟ ಬೆಲೆ ₹1.5 ಕೋಟಿಯಿಂದ 2.5 ಕೋಟಿ ಇರಲಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ₹6,890 ಕೋಟಿಯಷ್ಟು ಬುಕಿಂಗ್ ಗಳಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟದ ಬುಕಿಂಗ್ ಮೌಲ್ಯ ₹6 ಸಾವಿರ ಕೋಟಿಗಳಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.