ಚಿತ್ರಾ,ಗದಗ

ಪ್ರಶ್ನೆ: ನಾನು 38 ವರ್ಷ ವಯಸ್ಸಿನ ಮಹಿಳೆ. ಮನೆಯಲ್ಲಿಯೇ ಕಡಲೆಕಾಯಿ ಬೆಣ್ಣೆ ತಯಾರಿಸುವ ಉದ್ಯಮ ನಡೆಸುತ್ತಿದ್ದೇನೆ. ಈ ಉತ್ಪನ್ನವನ್ನು ಬ್ರ್ಯಾಂಡ್ ಮಾಡಿದ್ದೇನೆ. ಪ್ರಸ್ತುತ ನಾನು ತಿಂಗಳಿಗೆ ₹ 70 ಸಾವಿರ ವರಮಾನ ಗಳಿಸುತ್ತಿದ್ದೇನೆ. ಸಣ್ಣ ಉತ್ಪಾದನಾ ಘಟಕ ಸ್ಥಾಪಿಸಲು ನನಗೆ ₹ 20 ಲಕ್ಷ ಬೇಕು. ಬ್ಯಾಂಕ್ ಒಂದರಿಂದ ಹಣಕಾಸು ನೆರವು ಕೇಳಿದಾಗ ಪ್ರೋತ್ಸಾಹದ ಉತ್ತರ ದೊರಕಲಿಲ್ಲ. ಈ ಮೊತ್ತವನ್ನು ನಾನು ಬೇರೆ ಯಾವ ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಬಹುದು?

ಉತ್ತರ: ನೀವು ಮಹಿಳಾ ಉದ್ಯಮಿಯಾಗಿರುವುದರಿಂದ ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯಡಿ ಸಾಲ ಪಡೆಯಲು ಅರ್ಹರು. Udyammitra.in ಜಾಲತಾಣದಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ. ಈ ಜಾಲತಾಣವು ಸಾಲ ಮಾತ್ರವಲ್ಲದೇ, ಉದ್ಯಮಕ್ಕೆ ಬೆಂಬಲ, ಉದ್ಯಮದಲ್ಲಿ ಆಸಕ್ತಿ ಹೊಂದಿರುವವರೊಡನೆ (ಬ್ಯಾಂಕುಗಳು, ಸೇವೆ ಒದಗಿಸುವವರು, ಅರ್ಜಿದಾರರು) ಸಂಪರ್ಕ ಇತ್ಯಾದಿ ಸೇವೆಗಳನ್ನು ಒದಗಿಸುತ್ತದೆ.

ಸಾಲಕ್ಕಾಗಿ ಅರ್ಜಿಗಳನ್ನು ಪಡೆಯಲು, ಮಾಹಿತಿ ಪಡೆಯಲು, ನೋಂದಣಿ ಮಾಡಲು ಮತ್ತು ಉದ್ಯಮ ನಿರ್ವಹಣೆಗಾಗಿ ಬೆಂಬಲ ಹಾಗೂ ಮಾರ್ಗದರ್ಶನ ಪಡೆಯಲು ಅವಶ್ಯಕ ಲಿಂಕ್‌ಗಳನ್ನು ಈ ಜಾಲತಾಣ ಹೊಂದಿದೆ. ಸಾಲ ಮಾರುಕಟ್ಟೆಯಲ್ಲಿ ಸಕ್ರಿಯನಾಗಿರುವ ಯಾವುದೇ ಬ್ಯಾಂಕರ್ ಪಿ3 (peruse, pick and process) ಮಾದರಿಯನ್ನು ಅನುಸರಿಸಿ, ಸಾಲದ ಅರ್ಜಿಯನ್ನು ಸ್ವೀಕರಿಸಿರುವ ಅಥವಾ ತಿರಸ್ಕರಿಸಿರುವುದರ ಕುರಿತು ಮಾಹಿತಿಯನ್ನು ಜಾಲತಾಣದಲ್ಲಿ ನೀಡಲಾಗುತ್ತದೆ. ಈ ಆನ್‌ಲೈನ್ ಸಾಲ ಮಾರುಕಟ್ಟೆಯಲ್ಲಿರುವ ಸಾಲದ ಅರ್ಜಿಗಳನ್ನು ಸಾಲ ಸಂಸ್ಥೆಗಳು ಪರಿಗಣಿಸುತ್ತವೆ. ಈ ಅರ್ಜಿಗಳನ್ನು ಬ್ಯಾಂಕುಗಳು ಪರಿಪಾಲಿಸುವ ಗ್ರಾಹಕ ಬದ್ಧತೆ ಸಂಹಿತೆ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ.

ನಿಮ್ಮ ಸಾಲದ ಅರ್ಜಿಯು ವಿಲೇವಾರಿಯಾಗುವವರೆಗೂ ಈ ಜಾಲತಾಣದಲ್ಲಿ ಸಲ್ಲಿಸಿರುವ ಎಲ್ಲ ಸಾಲದ ಅರ್ಜಿಗಳನ್ನು ಪರಿಗಣಿಸಲಾಗಿದೆಯೇ ಇಲ್ಲವೇ ಎಂಬುದನ್ನು ಎಲ್ಲ ಸಾಲ ನೀಡಿಕೆ ಸಂಸ್ಥೆಗಳು, ಬೆಂಬಲ ನೀಡುವ ಸಂಸ್ಥೆಗಳು, ಅರ್ಜಿದಾರರು, ಸಿಡ್ಬಿ ಮತ್ತು ಸರ್ಕಾರದ ಅಂಗ ಸಂಸ್ಥೆಗಳು ವೀಕ್ಷಿಸಬಹುದಾಗಿದೆ.

ನಾರಾಯಣನ್,ಬೆಂಗಳೂರು

ಪ್ರಶ್ನೆ: ನನ್ನ ಬಳಿ ಪ್ರಸ್ತುತ ಇರುವ ಯಂತ್ರೋಪಕರಣಗಳನ್ನು ನಾನು ವಿದ್ಯುತ್ ಚಾಲಿತ ವಾಹನಗಳನ್ನು ತಯಾರಿಸಲು ಬಳಸುವ ಯೋಜನೆ ಹೊಂದಿದ್ದೇನೆ. ನನ್ನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಪಡೆಯಲು ಸರ್ಕಾರದಿಂದ ಪ್ರಮಾಣಪತ್ರ ಪಡೆಯುವ ಅಗತ್ಯವಿದೆಯೇ?

ಉತ್ತರ:ನೀವು ವಿದ್ಯುತ್ ಯಂತ್ರಗಳ ಒಇಎಂ ಉದ್ದೇಶಕ್ಕಾಗಿ ಬಿಡಿಭಾಗಗಳನ್ನು ಸರಬರಾಜು ಮಾಡುತ್ತೀರೆಂದು ನಾನು ಭಾವಿಸುತ್ತೇನೆ. ಹಾಗಿದ್ದಲ್ಲಿ ನೀವು ಬೇರೆ ಯಾವುದೇ ಪ್ರಮಾಣಪತ್ರ ಪಡೆಯುವ ಅವಶ್ಯಕತೆಯಿಲ್ಲ. ನೀವು ಒಇಎಂ ಅಥವಾ ಅವುಗಳನ್ನು ಸರಬರಾಜು ಮಾಡುವವರು ಸ್ಪಷ್ಟಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಒದಗಿಸತಕ್ಕದ್ದು.

ಶಿವ,ಹುಬ್ಬಳ್ಳಿ

ಪ್ರಶ್ನೆ: ದೀರ್ಘಾವಧಿಯವರೆಗೆ ಬಳಸುವ ಆರೋಗ್ಯವರ್ಧಕ ಆಹಾರೋತ್ಪನ್ನಗಳನ್ನು ನಾನು ತಯಾರು ಮಾಡುತ್ತೇನೆ. ಈ ಉತ್ಪನ್ನಗಳನ್ನು ನನ್ನ ಮನೆಯ ಸುತ್ತಮುತ್ತ ಇರುವ ಕೆಲವು ಅಂಗಡಿಗಳಿಗೆ ಮಾರಾಟ ಮಾಡುತ್ತೇನೆ. ನನ್ನ ಉದ್ಯಮವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದೇನೆ. ಆದರೆ ನಾನು ತಯಾರಿಸುವ ಹೆಚ್ಚಿನ ಪ್ರಮಾಣದ ಉತ್ಪನ್ನಗಳನ್ನು ಮಾರಾಟ ಮಾಡುವ ಬಗೆ ಹೇಗೆ?

ಉತ್ತರ: ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹಲವಾರು ಮಾರ್ಗಗಳಿವೆ. ನೀವು ಅಮೆಜಾನ್, ಬಿಗ್ ಬಾಸ್ಕೆಟ್‌ನಂತಹ ದೊಡ್ಡ ಕಂಪನಿಗಳು ಮತ್ತು ಸ್ಥಳೀಯವಾಗಿ ಆನ್‌ಲೈನ್ ಮೂಲಕ ಮಾರಾಟ ಮಾಡುವ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಜಿಮ್‌ಗಳೊಂದಿಗೆ, ಆಸ್ಪತ್ರೆಗಳ ಕ್ಯಾಂಟೀನ್‌ಗಳೊಂದಿಗೆ ನೀವು ಪಾಲುದಾರಿಕೆ ಮಾಡಿಕೊಳ್ಳಬಹುದು. ಈ ರೀತಿಯ ಉತ್ಪನ್ನಗಳನ್ನು ತಯಾರಿಸುವ ಇತರರು ಹೇಗೆ ಮತ್ತು ಎಲ್ಲಿ ಮಾರಾಟ ಮಾಡುತ್ತಾರೆ ಎಂಬುದನ್ನು ತಿಳಿಯಿರಿ. ನಿಮ್ಮ ಯೋಜನೆ ಯಶಸ್ವಿಯಾಗಲು ಉತ್ಪಾದನೆ, ಸರಬರಾಜು, ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ನಿಮಗೆ ವೃತ್ತಪರರಿಂದ ಮಾರ್ಗದರ್ಶನ ಮತ್ತು ಬೆಂಬಲದ ಅವಶ್ಯಕತೆಯಿದ್ದಲ್ಲಿ, ಮೈಸೂರಿನ ಸಿಎಫ್‌ಟಿಆರ್‌ಐ ನಲ್ಲಿರುವ ಸಮಾಲೋಚನಾ ಕೇಂದ್ರವನ್ನು ಸಂಪರ್ಕಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.