ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ತಮ್ಮ ಉದ್ಯಮ ಸಮೂಹದ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಯೋಜನೆಯನ್ನು ತೆರೆದಿರಿಸಿದ್ದಾರೆ. ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಅವರನ್ನು ದೂರಸಂಪರ್ಕ ಹಾಗೂ ರಿಟೇಲ್ ವಹಿವಾಟುಗಳ ನಾಯಕರನ್ನಾಗಿ ಗುರುತಿಸಿದ್ದಾರೆ.

ಕಿರಿಯ ಮಗ ಅನಂತ್ ಅಂಬಾನಿ ಅವರನ್ನು ಇಂಧನ ವಿಭಾಗದ ನಾಯಕರನ್ನಾಗಿ ಗುರುತಿಸಿದ್ದಾರೆ. ಆದರೆ, ತಾವು ಈಗಲೇ ನಿವೃತ್ತರಾಗುವುದಿಲ್ಲ ಎಂಬುದನ್ನು ಮುಕೇಶ್ ಅಂಬಾನಿ ಸ್ಪಷ್ಟಪಡಿಸಿದ್ದಾರೆ.

ಆರ್ಐಎಲ್ ಮೂರು ಬಗೆಯ ವಹಿವಾಟುಗಳನ್ನು ಹೊಂದಿದೆ. ತೈಲ ಸಂಸ್ಕರಣೆ ಮತ್ತು ಪೆಟ್ರೊಕೆಮಿಕಲ್ಸ್ ವಹಿವಾಟು, ರಿಟೇಲ್ ವಹಿವಾಟು, ದೂರಸಂಪರ್ಕ ಸೇವೆಗಳನ್ನು ಒಳಗೊಂಡಿರುವ ಡಿಜಿಟಲ್ ಸೇವಾ ವಹಿವಾಟು. ರಿಟೇಲ್ ಮತ್ತು ಡಿಜಿಟಲ್ ವಹಿವಾಟುಗಳನ್ನು ಜಿಯೋ ಪ್ಲಾಟ್ಫಾರ್ಮ್ಸ್ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ವಿಎಲ್) ಅಡಿ ತರಲಾಗಿದೆ.

ಈವರೆಗೆ ಆಕಾಶ್ ಅವರು ಮಾತ್ರ ಕಂಪನಿಯೊಂದರ ಕಾರ್ಯನಿರ್ವಾಹಕ ಮುಖ್ಯಸ್ಥ ಹುದ್ದೆಯನ್ನು ಹೊಂದಿದ್ದಾರೆ. ಇನ್ನಿಬ್ಬರು ಆಡಳಿತ ಮಂಡಳಿಗಳಲ್ಲಿ ಮಾತ್ರ ಇದ್ದಾರೆ.

ಸೋಮವಾರ ನಡೆದ ರಿಲಯನ್ಸ್ ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ಅವರು ಇಶಾ ಅವರನ್ನು ‘ರಿಟೇಲ್ ವಹಿವಾಟುಗಳ ನಾಯಕಿ’ ಎಂದು ಪರಿಚಯಿಸಿದರು. ಅನಂತ್ ಅವರು ನವ ಇಂಧನ ವಹಿವಾಟುಗಳನ್ನು ನೋಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.