ನವದೆಹಲಿ: ಬ್ಯಾಂಕ್ ಖಾತೆಯಲ್ಲಿ ಹಣ ಹೊಂದಿದ್ದರೂ ಕೆವೈಸಿ ಪೂರ್ಣಗೊಳಿಸದ ಫಾಸ್ಟ್ಯಾಗ್ಗಳನ್ನು ನಿಷ್ಕ್ರಿಯಗೊಳಿಸಲು ನೀಡಿದ್ದ ಗಡುವನ್ನು ಫೆಬ್ರುವರಿ 29ರ ವರೆಗೆ ವಿಸ್ತರಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ನ ಆದೇಶ ಉಲ್ಲಂಘಿಸಿ ನಿರ್ದಿಷ್ಟ ವಾಹನಕ್ಕೆ ಬಹು ಫಾಸ್ಟ್ಯಾಗ್ಗಳನ್ನು ಬಳಕೆ ಮಾಡಲಾಗುತ್ತಿತ್ತು. ಅಲ್ಲದೇ, ಕೆವೈಸಿ ಇಲ್ಲದೆಯೇ ಫಾಸ್ಟ್ಯಾಗ್ಗಳನ್ನು ನೀಡಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಪ್ರಾಧಿಕಾರವು ಈ ಕ್ರಮಕೈಗೊಂಡಿದೆ.

ದೇಶದಲ್ಲಿ ಕೆವೈಸಿ ಪೂರ್ಣಗೊಳಿಸದ 1.27 ಕೋಟಿ ಫಾಸ್ಟ್ಯಾಗ್ಗಳಿವೆ. ಜನವರಿ 31ರವರೆಗೆ ನೀಡಿದ್ದ ಗಡುವಿನೊಳಗೆ ಕೇವಲ 7 ಲಕ್ಷ ಕೆವೈಸಿಗಳಷ್ಟೇ ಪೂರ್ಣಗೊಂಡಿವೆ. ಹಾಗಾಗಿ, ಅವಧಿ ವಿಸ್ತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.