ನವದೆಹಲಿ: ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ. ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿರುವ ಷೇರುಗಳನ್ನು ಮರಳಿ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾಫಿ ಡೇ ಎಂಟರ್ಪ್ರೈಸಸ್ ಹೇಳಿದೆ.

ತೆರಿಗೆ ಬಾಕಿಗೆ ಸಂಬಂಧಿಸಿದಂತೆ, ಮಾಹಿತಿ ತಂತ್ರಜ್ಞಾನ (ಐ.ಟಿ) ಕಂಪನಿ‘ಮೈಂಡ್ ಟ್ರೀ’ನಲ್ಲಿ, ಕೆಫೆ ಕಾಫಿ ಡೇ ವ್ಯವಸ್ಥಾಪಕ ನಿರ್ದೇಶಕ ವಿ.ಜಿ. ಸಿದ್ಧಾರ್ಥ ಮತ್ತು ಕಾಫಿ ಡೇ ಎಂಟರ್ಪ್ರೈಸಸ್ ಹೊಂದಿರುವ ಷೇರುಗಳಲ್ಲಿ ಕೆಲವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಫಿ ಡೇ, ಎಲ್ಲಾ ತೆರಿಗೆಗಳನ್ನೂ ಪಾವತಿಸಲಾಗಿದ್ದು, ಪರಿಷ್ಕೃತ ರಿಟರ್ನ್ಸ್ ಸಹ ಸಲ್ಲಿಸಲಾಗಿದೆ ಎಂದು ತಿಳಿಸಿದೆ. ಸಂಸ್ಥೆಯಾಗಲಿ, ಅಂಗಸಂಸ್ಥೆಗಳಾಗಲಿ, ಪ್ರವರ್ತಕರಾಗಲಿ ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಷೇರುಪೇಟೆಗೆ ಸ್ಪಷ್ಟನೆ ನೀಡಿದೆ.

ಮೈಂಡ್ ಟ್ರೀನಲ್ಲಿ ಹೊಂದಿರುವ 74.90 ಲಕ್ಷ ಷೇರುಗಳನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಪಡೆದಿದೆ. ಇದರಲ್ಲಿ 22.20 ಲಕ್ಷ ಷೇರುಗಳು ಕಾಫಿ ಡೇ ಎಂಟರ್ಪ್ರೈಸಸ್ಗೆ ಸೇರಿದ್ದು, 52.70 ಲಕ್ಷ ಷೇರುಗಳು ಪ್ರವರ್ತಕ ಸಿದ್ಧಾರ್ಥ ಅವರದ್ದಾಗಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.