ಲಂಡನ್: ಇಸ್ರೇಲ್ ಮೇಲೆ ಇರಾನ್ ಆರಂಭಿಸಿರುವ ದಾಳಿಯಿಂದಾಗಿ ಸೋಮವಾರದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಆದರೆ ಇಸ್ರೇಲ್, ಅಮೆರಿಕ ಸೇರಿ ಇತರೆ ರಾಷ್ಟ್ರಗಳು ಈ ದಾಳಿ ವಿರುದ್ಧ ಹೇಗೆ ಪ್ರತೀಕಾರಕ್ಕೆ ಇಳಿಯುತ್ತವೆ ಎನ್ನುವುದರ ಆಧಾರದ ಮೇಲೆ ಬೆಲೆ ಏರಿಕೆಯು ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿ ಇರುವ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಪ್ರತಿ ದಾಳಿ ಆರಂಭಿಸಿದೆ. ಇದರಿಂದ ಕಳೆದ ವಾರ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ₹92.18 ಡಾಲರ್‌ಗೆ ತಲುಪಿತ್ತು. ಇದು ಕಳೆದ ಅಕ್ಟೋಬರ್‌ನಿಂದ ಗರಿಷ್ಠ ಮಟ್ಟದ ಏರಿಕೆಯಾಗಿದೆ. ಭಾನುವಾರ ಪ್ರತಿ ಬ್ಯಾರೆಲ್‌ಗೆ 90.45 ಡಾಲರ್ ಆಗಿದೆ.

ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 85.66 ಡಾಲರ್ ಆಗಿದೆ.

‘ತೈಲ ವ್ಯಾಪಾರ ಪುನರಾರಂಭದ ವೇಳೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ, ಇಲ್ಲಿಯವರೆಗೂ ಕಚ್ಚಾ ತೈಲದ ಉತ್ಪಾದನೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ’ ಎಂದು ಕಚ್ಚಾ ತೈಲದ ಬ್ರೋಕರೇಜ್ ಕಂಪನಿಯಾದ ಪಿವಿಎಂನ ವಿಶ್ಲೇಷಕ ಥಾಮಸ್ ವಾರ್ಗ ಹೇಳಿದ್ದಾರೆ.

‘ಇಸ್ರೇಲ್ ಮೇಲೆ ಮೊದಲ ಬಾರಿಗೆ ಇರಾನ್ ದಾಳಿ ಆರಂಭಿಸಿರುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಜಾಗತಿಕ ಬ್ರೊಕರೇಜ್ ಸಂಸ್ಥೆಯಾದ ಯುಬಿಎಸ್‌ನ ವಿಶ್ಲೇಷಕ ಜಿಯೋವಾನಿ ಸ್ಟೌನೊವೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.