ಗ್ರೇಟರ್ ನೋಯಿಡಾ: ದೇಶಿ ಪ್ರಯಾಣಿಕ ವಾಹನ ಮಾರಾಟ ಜನವರಿಯಲ್ಲಿ ಶೇ 6.2ರಷ್ಟು ಇಳಿಕೆ ಕಂಡಿದೆ.

‘ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಇರುವುದು ಹಾಗೂ ವಾಹನದ ಮಾಲೀಕತ್ವ ದುಬಾರಿಯಾಗಿರುವುದರಿಂದ ಮಾರಾಟದಲ್ಲಿ ಇಳಿಕೆಯಾಗುತ್ತಿದೆ’ ಎಂದು ಭಾರತೀಯ ವಾಹನ ತಯಾರಿಕಾ ಸಂಘದ (ಎಸ್ಐಎಎಂ) ಅಧ್ಯಕ್ಷ ರಾಜನ್ ವಧೇರಾ ತಿಳಿಸಿದ್ದಾರೆ.

‘ಮೂಲಸೌಕರ್ಯ ಮತ್ತು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲುಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಕ್ರಮಗಳಿಂದಾಗಿ ವಾಣಿಜ್ಯ ಮತ್ತು ದ್ವಿಚಕ್ರವಾಹನಗಳ ಮಾರಾಟದಲ್ಲಿ ಏರಿಕೆಯಾಗುವ ವಿಶ್ವಾಸವಿದೆ’ ಎಂದೂ ಅವರು ಹೇಳಿದ್ದಾರೆ.

ಬಿಎಸ್6ಗೆ ಸ್ಥಿತ್ಯಂತರ ಹೊಂದುತ್ತಿರುವುದರಿಂದ ವಾಹನಗಳ ಬೆಲೆ ಹೆಚ್ಚಾಗಿದೆ. ತಯಾರಿಕಾ ವೆಚ್ಚ ಏರಿಕೆಯಾಗುತ್ತಿರುವುದರಿಂದ ಬಹುತೇಕ ಎಲ್ಲಾ ಕಂಪನಿಗಳೂ ಜನವರಿಯಿಂದಲೇ ಬೆಲೆ ಏರಿಕೆಯನ್ನು ಜಾರಿಗೊಳಿಸಿವೆ.

‘ತ್ರಿಚಕ್ರ ಹೊರತುಪಡಿಸಿ ಉಳಿದೆಲ್ಲಾ ಮಾದರಿಗಳ ಸಗಟು ಮಾರಾಟ ಕುಸಿತ ಕಂಡಿದೆ’ ಎಂದು ಒಕ್ಕೂಟದ ನಿರ್ದೇಶಕ ರಾಜೇಶ್ ಮೆನನ್ ತಿಳಿಸಿದ್ದಾರೆ.

ಪ್ರಯಾಣಿಕ ವಾಹನ – 2.90 – 1.62%

ಕಾರು– 1.79 –1.64 – 8%

ದ್ವಿಚಕ್ರ –15.97 –13.41 –16%

ಮೋಟರ್ಸೈಕಲ್ –10.27 –18.71 –15%

ಸ್ಕೂಟರ್ –4.97 – 4.16 –16%

ವಾಣಿಜ್ಯ ವಾಹನ –87,591 – 75,289 –14.04%

ಎಲ್ಲಾ ಮಾದರಿ –20.19 –17.39 –14%

ಕಂಪನಿವಾರು ಮಾರಾಟದ ವಿವರ

ಮಾರುತಿ – 0.20% ಏರಿಕೆ

ಹುಂಡೈ – 8.3% ಇಳಿಕೆ

ಮಹೀಂದ್ರಾ – 17% ಇಳಿಕೆ

ಹೀರೊಮೋಟೊಕಾರ್ಪ್ – 14% ಇಳಿಕೆ

ಹೋಂಡಾ ಮೋಟರ್ಸೈಕಲ್ – 6.63% ಇಳಿಕೆ

ಟಿವಿಎಸ್ ಮೋಟರ್ – 28.72% ಇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.