ನವದೆಹಲಿ: ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು ಸೆಪ್ಟೆಂಬರ್ ತಿಂಗಳಲ್ಲಿ ಶೇ. 23.69 ಇಳಿಕೆ ಕಂಡಿದೆ. ಕಳೆದ ವರ್ಷ 2,92,660 ಯುನಿಟ್ ಮಾರಾಟವಾಗಿದ್ದು ಈ ವರ್ಷ ಮಾರಾಟ 2,23,317 ಯುನಿಟ್‌ಗೆ ಇಳಿದಿದೆ.

ಕಳೆದ 11 ತಿಂಗಳಲ್ಲಿ ವಾಹನ ಮಾರಾಟದಲ್ಲಿ ಸತತ ಇಳಿಕೆ ಕಂಡು ಬಂದಿದ್ದು ಚೇತರಿಸುವ ಲಕ್ಷಣಗಳು ಕಾಣುತ್ತಿಲ್ಲ.

ಇದನ್ನೂ ಓದಿ:ಪ್ರಯಾಣಿಕ ವಾಹನ ಮಾರಾಟ ಇಳಿಕೆ

2018 ಸೆಪ್ಟೆಂಬರ್ ತಿಂಗಳಲ್ಲಿ 1,97,124 ಯುನಿಟ್ ಕಾರು ಮಾರಾಟವಾಗಿತ್ತು. ಅದೇ ವೇಳೆ ಕಳೆದ ತಿಂಗಳು 1,31,281 ಯುನಿಟ್ ಕಾರು ಮಾರಾಟವಾಗಿದೆ. ಅಂದರೆ ದೇಶೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟ ಶೇ.33.4 ರಷ್ಟು ಕುಸಿತ ಕಂಡಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಎಐಎಂ) ಶುಕ್ರವಾರ ಹೇಳಿದೆ.

ಕಳೆದ ವರ್ಷ ಮೊಟಾರ್ ಸೈಕಲ್ 13,60,415 ಯುನಿಟ್ ಮಾರಾಟವಾಗಿತ್ತು. ಕಳೆದ ತಿಂಗಳು 10,43,624 ಯುನಿಟ್ ಮಾರಾಟವಾಗಿದ್ದು ಶೇ 23.29 ರಷ್ಟು ಕುಸಿತವುಂಟಾಗಿದೆ.

ಇದನ್ನೂ ಓದಿ:ಆರ್ಥಿಕ ಕುಸಿತ: ಅರ್ಧಕ್ಕಿಳಿದ ವಾಹನ ಮಾರಾಟ

ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟ ಶೇ. 22.09 ರಷ್ಟು ಇಳಿದಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 21,26,445 ಯುನಿಟ್ ಮಾರಾಟವಾಗಿದ್ದು ಈ ವರ್ಷ 16,56,774 ಯುನಿಟ್ ಮಾರಾಟವಾಗಿದೆ.
ವಾಣಿಜ್ಯೋದ್ದೇಶಿತ ವಾಹನಗಳ ಮಾರಾಟದಲ್ಲಿ ಶೇ. 39.06 ಇಳಿಕೆ ಕಂಡುಬಂದಿದೆ. ಕಳೆದ ವರ್ಷ 95,870 ಯುನಿಟ್ ಮಾರಾಟವಾಗಿದ್ದು ಪ್ರಸಕ್ತ ವರ್ಷ 58,419 ಯುನಿಟ್ ಮಾರಾಟವಾಗಿದೆ.

ಎಲ್ಲ ರೀತಿಯ ವಾಹನ ಮಾರಾಟಗಲ್ಲಿ ಶೇ. 22.41 ಕುಸಿತ ಕಂಡು ಬಂದಿದೆ. 2018ರಲ್ಲಿ 25,84,062 ಯುನಿಟ್ ಮಾರಾಟವಾಗಿದ್ದರೆ ಈ ವರ್ಷ 20,04,932 ಯುನಿಟ್ ಮಾರಾಟವಾಗಿದೆ ಎಂದು ಎಸ್‌ಎಐಎಂ ಹೇಳಿದೆ.

ಇದನ್ನೂ ಓದಿ:ಮಾರುತಿ ಸುಜುಕಿ: ಸೆಪ್ಟೆಂಬರ್‌ನಲ್ಲಿ ಶೇ 17.48ರಷ್ಟು ತಯಾರಿಕೆ ಕಡಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.