ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ (ಪಿಪಿಬಿಎಲ್) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸುರೀಂದರ್ ಚಾವ್ಲಾ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪೇಟಿಎಂ ಬ್ಯಾಂಕ್ ವಹಿವಾಟಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿರುವ ಬೆನ್ನಲ್ಲೇ ಚಾವ್ಲಾ ರಾಜೀನಾಮೆ ನೀಡಿದ್ದಾರೆ.

‘ವೈಯಕ್ತಿಕ ಕಾರಣ ಹಾಗೂ ವೃತ್ತಿಪರತೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಚಾವ್ಲಾ, ಏಪ್ರಿಲ್ 8ರಂದು ರಾಜೀನಾಮೆ ಸಲ್ಲಿಸಿದ್ದಾರೆ. ಜೂನ್ 26ರಂದು ಅವರನ್ನು ಕಂಪನಿಯ ಉದ್ಯೋಗದಿಂದ ಮುಕ್ತಗೊಳಿಸಲಾ ಗುವುದು’ ಎಂದು ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯುನಿಕೇಷನ್, ಷೇರುಪೇಟೆಗೆ ತಿಳಿಸಿದೆ. ಆರ್ಬಿಐ ಅನುಮೋದನೆ ನೀಡಿದ ಬಳಿಕ ಕಳೆದ ವರ್ಷದ ಜನವರಿಯಲ್ಲಿ ಚಾವ್ಲಾ ಅವರು ಪಿಪಿಬಿಎಲ್ಗೆ ಸೇರ್ಪಡೆಗೊಂಡಿದ್ದರು.

ಷೇರಿನ ಮೌಲ್ಯ ಶೇ 1ರಷ್ಟು ಕುಸಿತ: ಚಾವ್ಲಾ ಅವರ ರಾಜೀನಾಮೆ ಬೆನ್ನಲ್ಲೇ ಒನ್97 ಕಮ್ಯುನಿಕೇಷನ್ನ ಷೇರಿನ ಮೌಲ್ಯವು ಶೇ 1ರಷ್ಟು ಕುಸಿದಿದೆ. ಬೆಳಿಗ್ಗಿನ ವಹಿವಾಟಿನಲ್ಲಿ ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಷೇರಿನ ಮೌಲ್ಯ ಶೇ 4ರಷ್ಟು ಕುಸಿತ ಕಂಡಿತ್ತು.

ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯವು ₹241.45 ಕೋಟಿ ಕರಗಿದೆ. ಸದ್ಯ ಮಾರುಕಟ್ಟೆ ಮೌಲ್ಯ ₹25,448 ಕೋಟಿ ಆಗಿದೆ. ಪಿಪಿಬಿಎಲ್ನಲ್ಲಿ ಒನ್97 ಕಮ್ಯುನಿಕೇಷನ್ ಶೇ 49ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದೆ.
.ಪೇಟಿಎಂ ಪೇಮೆಂಟ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ.ಪೇಟಿಎಂ PPBL ಮೇಲೆ ವಿಧಿಸಿದ್ದ ನಿರ್ಬಂಧ ವಿಸ್ತರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.