ನವದೆಹಲಿ: ಡಿಜಿಟಲ್ ಪಾವತಿ ಸೇರಿದಂತೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುವ ಪೇಟಿಎಂ ಈ ವರ್ಷದಲ್ಲಿ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಒಟ್ಟು ₹ 21,700 ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಅದು ಹೊಂದಿದೆ.

ಐಪಿಒ ಮೂಲಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಸಂಗ್ರಹಿಸಲು ಪೇಟಿಎಂಗೆ ಸಾಧ್ಯವಾದರೆ, ಭಾರತದ ಅತಿದೊಡ್ಡ ಐಪಿಒ ಇದಾಗಲಿದೆ. 2010ರಲ್ಲಿ ಕೋಲ್ ಇಂಡಿಯಾ ಕಂಪನಿಯು ಐಪಿಒ ಮೂಲಕ ₹ 15,200 ಕೋಟಿ ಸಂಗ್ರಹಿಸಿದ್ದು ಇದುವರೆಗಿನ ಅತಿದೊಡ್ಡ ಮೊತ್ತ.

ಐಪಿಒ ಪ್ರಸ್ತಾವ ಕುರಿತು ಚರ್ಚಿಸಲು ಪೇಟಿಎಂ ಆಡಳಿತ ಮಂಡಳಿಯು ಶುಕ್ರವಾರ ಸಭೆ ಸೇರುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ಪೇಟಿಎಂ ನಿರಾಕರಿಸಿದೆ. ಪಾಲಿಸಿಬಜಾರ್, ಡೆಲ್ಲಿವರಿ ಮತ್ತು ಮೊಬಿಕ್ವಿಕ್ ಕೂಡ ಐಪಿಒಗೆ ಸಿದ್ಧತೆ ನಡೆಸಿವೆ ಎನ್ನಲಾಗಿದೆ.

ಷೇರುಪೇಟೆ ಬಂಡವಾಳ ₹220 ಲಕ್ಷ ಕೋಟಿಗೆ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.