ನವದೆಹಲಿ: ‘2018–19ನೇ ಹಣಕಾಸು ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ (ಇಪಿಎಫ್ಒ) ಶೀಘ್ರವೇ ಶೇ 8.65ರ ಬಡ್ಡಿದರ ಜಮೆಯಾಗಲಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.

‘ಹಬ್ಬದ ಸಂದರ್ಭದಲ್ಲಿ 6 ಕೋಟಿಗೂ ಅಧಿಕ ಚಂದಾದಾರರಿಗೆ ಈ ಕೊಡುಗೆ ದೊರೆಯಲಿದೆ’ ಎಂದೂ ಅವರು ಹೇಳಿದ್ದಾರೆ.

ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಸಂದರ್ಭದಲ್ಲಿ ಮಂಗಳವಾರ ಮಾತನಾಡಿದರು.

‘ಇಪಿಎಫ್ಒನ ಕೇಂದ್ರೀಯ ಧರ್ಮದರ್ಶಿ ಮಂಡಳಿಯು ಈ ಬಡ್ಡಿದರ ನೀಡಲು ಸಮ್ಮತಿಸಿದೆ. ಇದಕ್ಕೆ ಹಣಕಾಸು ಸಚಿವಾಲಯ ತನ್ನ ಒಪ್ಪಿಗೆ ನೀಡಬೇಕಿದೆ. ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಹಲವು ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಬಡ್ಡಿದರ ನಿಗದಿಪಡಿಸುವ ಕಡತ ಅವರ ಬಳಿ ಇದೆ. ಪ್ರಸ್ತಾವಕ್ಕೆ ಅವರ ವಿರೋಧವೇನೂ ಇಲ್ಲ. ಒಮ್ಮೆ ಅನುಮತಿ ದೊರೆತರೆ, ಕೆಲವೇ ದಿನಗಳಲ್ಲಿ ಚಂದಾದಾರರಿಗೆ ವರ್ಗಾವಣೆ ಆಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.