"ಯು.ಪಿ. ಪುರಾಣಿಕ್"

ಹೆಸರು ಬೇಡ, ಕಾರವಾರ

ನಾನು ನನ್ನ ಮನೆಯನ್ನು₹ 80 ಲಕ್ಷಕ್ಕೆ ಮಾರಾಟ ಮಾಡಲು ನಿರ್ಧರಿಸಿದ್ದೇನೆ. ಬರುವ ಈ ಹಣದಿಂದ₹ 40 ಲಕ್ಷಕ್ಕೆ ಇನ್ನೊಂದು ಮನೆಯನ್ನು ಖರೀದಿಸುವ ಉದ್ದೇಶ ನನ್ನದು. ₹ 15 ಲಕ್ಷ ಸಾಲ ತೀರಿಸಲಿದ್ದೇನೆ. ಉಳಿದ ಹಣವನ್ನು ಹೆಂಡತಿ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಬಹುದೇ, ನನಗೆ ಯಾವುದಾದರೂ ತೆರಿಗೆ ಅನ್ವಯವಾಗುವುದೇ ತಿಳಿಸಿರಿ.

ಉತ್ತರ: ನೀವು₹ 80 ಲಕ್ಷ ಮನೆ ಮಾರಾಟದಿಂದ ಬರುವ ಹಣ ಪಡೆದರೆ, ನೀವು ಬಯಸಿದಂತೆ₹ 40 ಲಕ್ಷದ ಇನ್ನೊಂದು ಮನೆ ಕೊಂಡರೆ ಈ₹ 40 ಲಕ್ಷ, ಮೊದಲ ಬಾರಿಗೆ ನೀವು ಮನೆ ಖರೀದಿಸುವಾಗ ಕೊಟ್ಟ ಹಣ, ನೋಂದಣಿ ಖರ್ಚು ಹಾಗೂ ಖರೀದಿಸಿದ ವರ್ಷದಿಂದ ಇಲ್ಲಿಯವರೆಗಿನ Cost Of Inflation Index ಲೆಕ್ಕ ಹಾಕಿ ಬರುವ ಮೊತ್ತವನ್ನು ₹ 80 ಲಕ್ಷದಲ್ಲಿ ಕಳೆದು ಉಳಿದ ಹಣಕ್ಕೆ ಮಾತ್ರ ಶೇ 20 ರಷ್ಟು ಕ್ಯಾಪಿಟಲ್ಗೇನ್ ಟ್ಯಾಕ್ಸ್ ತುಂಬಬೇಕಾಗುತ್ತದೆ. ಈ ತೆರಿಗೆಗೆ ಒಳಪಡುವ ಹಣವನ್ನು NHIA ಅಥವಾ REC ಬಾಂಡ್ಗಳಲ್ಲಿ ತೊಡಗಿಸಿ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಬಹುದು. ಇಲ್ಲಿ ವಾರ್ಷಿಕ ಶೇ 5.75ರಷ್ಟು ಬಡ್ಡಿ ಪಾವತಿಸಲಾಗುತ್ತದೆ. ಈ ಠೇವಣಿಯನ್ನು 5 ವರ್ಷಗಳ ಕಾಲ ಹಿಂದೆ ಪಡೆಯುವಂತಿಲ್ಲ. ನಿಮ್ಮ ₹ 15 ಲಕ್ಷದಷ್ಟು ಸಾಲವನ್ನು ಮನೆ ಮಾರಿ ಬಂದಿರುವ ಲಾಭದಲ್ಲಿ ಕಳೆದು ತೆರಿಗೆ ಉಳಿಸುವಂತಿಲ್ಲ. ಇಲ್ಲಿ ವಿವರಿಸಿದಂತೆ ಕ್ಯಾಪಿಟಲ್ಗೇನ್ ಬಾಂಡ್ನಲ್ಲಿ ಇರಿಸಿ ತೆರಿಗೆ ಉಳಿಸಬಹುದು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಶೇ 20ರಷ್ಟು ತೆರಿಗೆ ಕೊಡಬೇಕಾಗುತ್ತದೆ.

ಎಸ್.ಡಿ. ಬೋರೇಗೌಡ, ಗಿರಿನಗರ, ಬೆಂಗಳೂರು

ನನ್ನ ವಯಸ್ಸು 88. ನಾನು ನಿವೃತ್ತ ಎಂಜಿನಿಯರ್. ತಿಂಗಳ ಪಿಂಚಣಿ₹ 44,769. ಠೇವಣಿ ಮೇಲಿನ ವಾರ್ಷಿಕ ಬಡ್ಡಿ₹ 24,082. ಬೇರಾವ ಆದಾಯವಿಲ್ಲ. ತೆರಿಗೆ I.T. Return ವಿಚಾರದಲ್ಲಿ ಸಲಹೆ ನೀಡಿರಿ.

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ, ಠೇವಣಿ ಮೇಲಿನ ಬಡ್ಡಿ ಹಾಗೂ ಪಡೆಯಬಹುದಾದ ವಿನಾಯಿತಿಗಳು, ನಂತರ ಕೊಡಬೇಕಾದ ತೆರಿಗೆ ವಿವರಣೆ ಈ ಕೆಳಗಿನಂತಿದೆ.

ಒಟ್ಟು ಆದಾಯ ₹7,83,310ರಲ್ಲಿ ಒಟ್ಟು ವಿನಾಯ್ತಿ ₹6,00,00 ಕಳೆದಾಗ ಆದಾಯ ತೆರಿಗೆಗೆ ಒಳಪಡುವ ಮೊತ್ತ ₹1,83,310

ತೆರಿಗೆ ಲೆಕ್ಕಾಚಾರ

ಶೇ 20 ರಂತೆ ₹ 183310 ಆದಾಯಕ್ಕೆ ₹36,662

ಶೇ 4 ಹೆಲ್ತ್ ಮತ್ತು ಎಜ್ಯುಕೇಷನ್ (₹ 36,662 ತೆರಿಗೆ ಮೇಲೆ) ₹1467

ಕೊಡಬೇಕಾದ ತೆರಿಗೆ ₹ 38,129

ನೀವು ಪ್ರತೀ ವರ್ಷ 31 ಜುಲೈ ಒಳಗೆ I.T. Return ಸಲ್ಲಿಸಬೇಕು.

ಯು.ಪಿ. ಪುರಾಣಿಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.